ಚಿತ್ರದುರ್ಗ : 97 ಲಕ್ಷ ರೂಪಾಯಿ ಸಮೇತ ಬಾಡಿಗೆ ಕಾರು ಚಾಲಕ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಸೀನಿಮಿಯ ರೀತಿಯಲ್ಲಿ ಆರೋಪಿ ಚಾಲಕರನ್ನು ಅರೆಸ್ಟ್ ಮಾಡಿದ್ದಾರೆ. ಚಳ್ಳಕೆರೆ ಠಾಣೆ ಸಿಪಿಐ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ಗೆ ವಂಚನೆ ಎಸಗಲಾಗಿತ್ತು. ನಿನ್ನೆ ಗುರುಪ್ರಸಾದ್ ಪತ್ನಿಯ ಸಮೇತ ಬಳ್ಳಾರಿಗೆ ತೆರಳಿದ್ದರು. ಬಳ್ಳಾರಿಯಲ್ಲಿದ್ದ ಜಮೀನನ್ನು ಗುರುಪ್ರಸಾದ್ ಮಾರಾಟ ಮಾಡಿದ್ದಾರೆ. ಜಾಮೀನು ಮಾರಾಟ ಮಾಡಿದ ಒಟ್ಟು 97 ಲಕ್ಷ ರೂಪಾಯಿ ಪಡೆದು ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು.
ಈ ವೇಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಬಳಿ ಊಟಕ್ಕಾಗಿ ಗುರುಪ್ರಸಾದ್ ಹೋಟೆಲಿಗೆ ತೆರಳಿದ್ದಾರೆ, ಈ ವೇಳೆ ಕಾರಿನಲ್ಲಿ ಇದ್ದಂತಹ ಹಣದ ಸಮೇತ ರಮೇಶ್ ಎಸ್ಕೇಪ್ ಆಗಿದ್ದ ಹಿಂದೂಪುರ ಮೂಲದ ರಮೇಶ್ ಆಂಧ್ರಕ್ಕೆ ಪ್ರಾರಾಗಲು ಯತ್ನಿಸಿದ್ದಾನೆ. ಸದ್ಯ ಚಳ್ಳಕೆರೆ ಪೊಲೀಸರು ಆರೋಪಿ ರಮೇಶನ್ನು ಅರೆಸ್ಟ್ ಮಾಡಿದ್ದಾರೆ ಅಲ್ಲದೆ ಆರೋಪಿ ಬಳಿ ಇದ್ದ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.