ಚಿತ್ರದುರ್ಗ: ಬೇಸಿಗೆ ಹೆಚ್ಚಾದಂತೆ ಬೆಂಕಿಯ ಅವಗಢಗಳು ಹೆಚ್ಚಾಗುತ್ತಿವೆ. ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದಂತ ಬೈಕ್ ಒಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಧಗಧಗಿಸಿ ಹೊತ್ತಿ ಉರಿದು, ಸುಟ್ಟು ಕರಕಲಾದಂತ ಘಟನೆ ಹಿರಿಯೂರಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ಇಂತಹ ಘಟನೆ ನಡೆದಿದೆ. ಪೊಲೀಸ್ ಇಲಾಖೆಯ ಬೈಕ್ ಗೆ ಆಕಸ್ಮಿಕ ಬೆಂಕಿ ತಲುಗುಲಿ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ.
ಹಿರಿಯೂರು ನಗರ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದಂತ ಪೊಲೀಸರ ಬೈಕ್ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಹೀಗೆ ಹೊತ್ತಿಕೊಂಡಂತ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಬೈಕಿಗೆ ವ್ಯಾಪಿಸಿ ಧಗಧಗಿಸಿ ಹೊತ್ತಿ ಉರಿದಿದೆ. ಸ್ಥಳದಲ್ಲಿದ್ದಂತ ಪೊಲೀಸರು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆಗಾಗೇ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ
ನನ್ನ ಶಕ್ತಿ ಇರುವುದು 1.4 ಬಿಲಿಯನ್ ಭಾರತೀಯರಲ್ಲಿ: ಪ್ರಧಾನಿ ಮೋದಿ | PM Modi
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!