ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ನಾಲ್ಕು ದಿನದ ಹಸುಗೂಸು ಸಾವನನಪ್ಪಿರುವ ಘಟನೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಇನ್ನೊರ್ವ ಯುವಕನನ್ನು ತೀವ್ರ ವಿಚಾರಣೆಗೊಳಪಡಿಸಿದ ‘NIA’
ಇದೀಗ ಕುಟುಂಬಸ್ಥರು ವೈದ್ಯರ ವಿರುದ್ಧ ನಿರ್ಲಕ್ಷ ಆರೋಪ ಮಾಡುತ್ತಿದ್ದು, ವೈದ್ಯರ ವಿರುದ್ಧ ಮೃತ ಮಗುವಿನ ಸಂಬಂಧಿಕರು ಇದೀಗ ಆರೋಪ ಮಾಡುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಹೆರಿಗೆಗಾಗಿ ಕವಿತಾ ಎನ್ನುವ ಮಹಿಳೆ ಆಸ್ಪತ್ರೆಯ ದಾಖಲಾಗಿದ್ದಳು.ಹೆರಿಗೆ ಬಳಿಕ ಮಗುವಿಗೆ ಚಿಕಿತ್ಸೆ ನೀಡದೆ ವೈದರು ನಿರ್ಲಕ್ಷ ತೋರಿದ್ದಾರೆ.
ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವೆಬ್ಸೈಟ್ನಿಂದ ಡಿಲೀಟ್ ಮಾಡಿದ ‘SBI’
ಮಕ್ಕಳ ತಜ್ಞ ವೈದ್ಯ ಶ್ರೀರಾಮ್ ವಿರುದ್ಧ ಇದೀಗ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ವೈದ್ಯರ ನಿರ್ಲಕ್ಷದಿಂದಲೇ ಮಗು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಘಟನೆಯ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಸರ್ಜನ್ ಡಾ.ರವೀಂದ್ರ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ! ತನಿಖೆ ಮಾಡಲು ಜ್ಞಾನಭಾರತಿ ಪೊಲೀಸರ ಹಿಂದೇಟು!?