ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚೆಗೆ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿದ್ದಾರೆ.
ಈ ಕುರಿತಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಟ್ವೀಟ್ ಮಾಡಿದ್ದಾರೆ.
1978 ರ ಹಿಟ್ ಚಿತ್ರ ಪುನದಿರಲು ಚಿತ್ರದ ಮೂಲಕ ಚಿರಂಜೀವಿ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಹಲವು ದೊಡ್ಡ-ಬಜೆಟ್ ತೆಲುಗು ಚಲನಚಿತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಹೆಚ್ಚಿನವು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಸಿನಿಮಾಗಳಾಗಿ ಹೊರಹೊಮ್ಮಿದವು. ಕೇಲವ ತೆಲುಗು ಮಾತ್ರವಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದಾರೆ.
INDIAN FILM PERSONALITY @IFFIGoa
Sh Chiranjeevi Ji has had an illustrious career spanning almost four decades, w/ over 150 films as an actor, dancer & producer.
He is immensely popular in Telegu Cinema w/ incredible performances touching hearts!
Congratulations @KChiruTweets! pic.twitter.com/ZIk0PvhzHX
— Anurag Thakur (@ianuragthakur) November 20, 2022
ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು 10 ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು 4 ನಂದಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ.
53 ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯಾ (IFFI) ಭಾನುವಾರ ಗೋವಾದಲ್ಲಿ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ಈ ವರ್ಷದ ಐಐಎಫ್ಐ ಪ್ರಶಸ್ತಿ ಉಪಕ್ರಮದ ’75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ’ ಭಾಗವಾಗಿ ಈ ವರ್ಷ 18-35 ವರ್ಷದೊಳಗಿನ 75 ಯುವಕರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ದಲಿತ ಮಹಿಳೆ’ ನೀರು ಕುಡಿದಿದ್ದಕ್ಕೆ ಗೋ ಮೂತ್ರದಿಂದ ‘ಟ್ಯಾಂಕ್’ಗಳ ಸ್ವಚ್ಛ: ಈ ‘ತಹಶೀಲ್ದಾರ್’ ಮಾಡಿದ್ದೇನು ಗೊತ್ತಾ?
BIGG NEWS : ಮಂಗಳೂರಿನಲ್ಲಿ ‘NIA’ ಅಧಿಕಾರಿಗಳಿಂದ ತೀವ್ರ ಶೋಧ : ಶಂಕಿತನ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆ