ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚೀನಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿದೆ. ಆದರೆ ಚೀನಾ ಮಾತ್ರ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಿಲ್ಲ. ಆದರೆ ದೇಶವು ದಿನಕ್ಕೆ 9 ಸಾವಿರ ಸಾವುಗಳನ್ನು ದಾಖಲಿಸುತ್ತಿದೆ ಎಂದು ಯುಕೆ ಮೂಲದ ಆರೋಗ್ಯ ತಜ್ಞರು ಅಂದಾಜು ಮಾಡಿದ್ದಾರೆ.
ಚೀನಾ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದಾಗಿನಿಂದ ಪ್ರಕರಣಗಳಲ್ಲಿ ಭಾರಿ ಹೆಚ್ಚಳವನ್ನು ದಾಖಲಿಸುತ್ತಿದೆ. ಡಿಸೆಂಬರ್ 1 ರಿಂದ ಚೀನಾದಲ್ಲಿ ಸಾವುಗಳು 100,000 ಕ್ಕೆ ತಲುಪಿದ್ದರೆ, ಸೋಂಕುಗಳು ಒಟ್ಟು 18.6 ಮಿಲಿಯನ್ ಆಗಿದೆ ಯುಕೆ ಮೂಲದ ಆರೋಗ್ಯ ದತ್ತಾಂಶ ಸಂಸ್ಥೆ ವಾಯುನೆಟೀಟಿ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 13 ರಂದು ಚೀನಾದ ಕೋವಿಡ್ ಸೋಂಕು ಉತ್ತುಂಗಕ್ಕೇರುವ ಸಾಧ್ಯೆತೆ ಇದ್ದು, ದಿನದಲ್ಲಿ 3.7 ಮಿಲಿಯನ್ ಕೇಸ್ ಗಳು ದಾಖಲಾಗಲಿವೆ ಎಂದು ಎಂದು ವಾಯುನೆಟೀಟಿ ಅಂದಾಜಿಸಿದೆ.
ಜನವರಿ 23 ರಂದು ದಿನಕ್ಕೆ ಸುಮಾರು 25,000 ಪ್ರಕರಣಗಳು ವರದಿಯಾಗಲಿದ್ದು, ಡಿಸೆಂಬರ್ನಿಂದ 584,000 ಕೋವಿಡ್ ಸಾವುಗಳು ಸಂಭವಿಸಬಹುದು ಎಂದು ಸಂಸ್ಥೆ ವರದಿ ಮಾಡಿದೆ.
ಈ ಎಲ್ಲಾ ಅಂದಾಜುಗಳು ಚೀನಾ ವರದಿ ಮಾಡುತ್ತಿರುವುದಕ್ಕೆ ತದ್ವಿರುದ್ಧವಾಗಿವೆ. ಬೀಜಿಂಗ್ ದಿನಕ್ಕೆ ಹಲವು ಸಾವಿರ ಪ್ರಕರಣಗಳನ್ನು ಮಾತ್ರ ವರದಿ ಮಾಡುತ್ತಿದ್ದು, ಡಿಸೆಂಬರ್ 7 ರಿಂದ ಕೇವಲ 10 ಸಾವುಗಳನ್ನು ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ, ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್, ದೇಶದ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ನೀಡುವಮತೆ ಚೀನಾವನ್ನು ಕೇಳಿದ್ದಾರೆ.
‘ಬಿಗ್ ಬಾಸ್’ ಮನೆಯಿಂದ ‘ದಿವ್ಯಾ ಉರುಡುಗ’ ಔಟ್ : ಈ ಸಲ ಯಾರಾಗಬಹುದು ವಿನ್ನರ್..? |BIGGBOSS-9