ಬೀಜಿಂಗ್ : ಚೀನಾದಲ್ಲಿ ಕಠಣ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಏಕಾಎಕಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಅಲ್ಲಿನ ಆಸ್ಪತ್ರೆಗಳು ರೋಗಿಗಳಿಂದ, ಸ್ಮಶಾನಗಳು ಮೃತದೇಹಗಳಿಂದ ತುಂಬಿ ತುಳುತ್ತಿದೆ. ಇತ್ತ ದಿನದಿಂದ ದಿನಕ್ಕೆ ಕೇಸ್ ಗಳು ಹೆಚ್ಚಾಗುತ್ತಲೆ ಇದೆ. ಕೇಲವ ಒಂದು ವಾರದಲ್ಲಿ ಚೀನಾದಲ್ಲಿ 218,019 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ವಾರದ ವರದಿಯಲ್ಲಿ ಈ ಮಾಹಿತಿ ನೀಡಿದೆ.
ದೇಶವು ಪ್ರಸ್ತುತ ವೈರಸ್ ಪ್ರಕರಣಗಳ ಹೆಚ್ಚಳದೊಂದಿಗೆ ಹೋರಾಡುತ್ತಿದೆ. ಮಂಗಳವಾರ ಕೋವಿಡ್ ಗೆ ಸಂಬಂಧಿಸಿದ ಐದು ಹೊಸ ಸಾವುಗಳನ್ನು ಚೀನಾ ವರದಿ ಮಾಡಿದೆ. ಚೀನಾದಲ್ಲಿ ಅಧಿಕೃತ ಸಾವಿನ ಸಂಖ್ಯೆಯನ್ನು 5,258 ಕ್ಕೆ ತಂದಿದೆ. ಇದು ಜಾಗತಿಕ ಮಾನದಂಡಗಳಿಂದ ತುಂಬಾ ಕಡಿಮೆಯಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ಬೀಜಿಂಗ್ ತನ್ನ ಶೂನ್ಯ ಕೋವಿಡ್ ನೀತಿಯನ್ನು ರದ್ದುಗೊಳಿಸಿದ್ದರಿಂದ ಚೀನಾದಲ್ಲಿ ದಾಖಲಾದ ಕೊರೊನಾ ರೋಗಿಗಳ ಕುರಿತು ಯಾವುದೇ ಡೇಟಾವನ್ನು ಸ್ವೀಕರಿಸಿಲ್ಲ ಎಂದು WHO ಹೇಳಿದೆ.ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ WHO ಆತಂಕ ವ್ಯಕ್ತಪಡಿಸಿದೆ
ಇದಕ್ಕೂ ಮುನ್ನ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯಸ್ಥರು ಬುಧವಾರ, ಚೀನಾದಾದ್ಯಂತ ಕೊರೊನಾ ಸ್ಫೋಟಕ ಹರಡುವಿಕೆ ಮತ್ತು ಸರ್ಕಾರದ ಮಾಹಿತಿಯ ಕೊರತೆಯ ನಡುವೆ ಏಜೆನ್ಸಿಯು ಚೀನಾದಲ್ಲಿ ಜನರ ಜೀವನಕ್ಕೆ ಪ್ರಸ್ತುತ ಬೆದರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದರು.
ಆಸ್ಪತ್ರೆಗೆ ದಾಖಲಾಗುವ ದರಗಳು ಮತ್ತು ಆನುವಂಶಿಕ ಅನುಕ್ರಮಗಳು ಸೇರಿದಂತೆ ಕೋವಿಡ್ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಸಂಸ್ಥೆಯು ಇತ್ತೀಚೆಗೆ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದೆ ಎಂದು ವಿಶ್ವ ಸಂಸ್ಥೆ ಮುಖ್ತಸ್ಥರು ಹೇಳಿದ್ದಾರೆ.
Good News : ದೇಶದ ರೈತರಿಗೆ ಭರ್ಜರಿ ನ್ಯೂಸ್ ; ‘Pm Kisan’ ಹಣ ದ್ವಿಗುಣ, ಅನ್ನದಾತರ ಆದಾಯ ದುಪ್ಪಟ್ಟು
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ: ಶಿವಕುಮಾರಸ್ವಾಮೀಜಿ ಗದ್ದುಗೆಗೆ ಗಮನ