ಕೆಎನ್ಎನ್ಡಿಜಿಟಲ್ ಡೆಸ್ಕ್ : ಚೀನಾ ಮತ್ತೊಮ್ಮೆ ಭೂಮಿಯನ್ನ ಅಪಾಯಕ್ಕೆ ಸಿಲುಕಿಸಿದೆ. ಚೀನಾದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ್ದ 23 ಟನ್ ತೂಕದ ರಾಕೆಟ್ ಉಡಾವಣೆ ಬಳಿಕ ವಿಫಲವಾಗಿದ್ದು, ಮತ್ತೆ ಭೂಮಿಯತ್ತ ಬೀಳುತ್ತಿದೆ. ಈ ರಾಕೆಟ್ ಮೆಂಗ್ಟಿಯನ್ ಮಾಡ್ಯೂಲ್’ನ್ನ ಹೊತ್ತುಕೊಂಡು ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿತು. ವರದಿಯ ಪ್ರಕಾರ, ಚೀನಾದ ವಿಜ್ಞಾನಿಗಳು ರಾಕೆಟ್’ನ್ನ ಕಕ್ಷೆಯಲ್ಲಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅದು ಭೂಮಿಯ ಕಡೆಗೆ ಬೀಳುತ್ತಿದೆ. ಇನ್ನು ಈ ರಾಕೆಟ್’ನ್ನ ಕಳೆದ ವಾರ ಉಡಾವಣೆ ಮಾಡಲಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (CSMA) ಮೆಂಗ್ಟಿಯನ್ ಮಾಡ್ಯೂಲ್ನೊಂದಿಗೆ ಲಾಂಗ್ ಮಾರ್ಟ್ 5B ರಾಕೆಟ್’ನ್ನ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾಯಿಸಿತು. ರಾಕೆಟ್ ವಾತಾವರಣದಲ್ಲಿ ಅಪ್ಪಳಿಸಿ ಉರಿಯುವ ನಿರೀಕ್ಷೆಯಿದೆ, ಆದರೆ ಕೆಲವು ತುಣುಕುಗಳು ನೆಲಕ್ಕೆ ಬೀಳಬಹುದು. ಚೀನಾದ ಬಾಹ್ಯಾಕಾಶ ಅವಶೇಷಗಳು ಇಡೀ ಜಗತ್ತಿಗೆ ಅಪಾಯವಾಗಿದೆ ಎಂದು ಏರೋಸ್ಪೇಸ್ ಕಾರ್ಪೊರೇಟ್ ಮುಖ್ಯ ಇಂಜಿನಿಯರ್ ಕಚೇರಿಯ ಸಲಹೆಗಾರ ಟೆಡ್ ಮುಲ್ಹಾಪ್ಟ್ ಹೇಳಿದ್ದಾರೆಂದು Space.com ಉಲ್ಲೇಖಿಸಿದೆ. ವಿಶ್ವದ ಜನಸಂಖ್ಯೆಯ ಸುಮಾರು 88 ಪ್ರತಿಶತದಷ್ಟು ಜನರು ಅಪಾಯದಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಚೀನಾದ ರಾಕೆಟ್ ಕೂಡ ನಿಯಂತ್ರಿಸಲಾಗದೆ ಭೂಮಿಯ ವಾತಾವರಣವನ್ನ ಪ್ರವೇಶಿಸಿತ್ತು. ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾದ ಎರಡನೇ ರಾಕೆಟ್ ಇದಾಗಿದೆ. ಉಡಾವಣೆಯಾದ ಆರು ದಿನಗಳ ನಂತರ ಅದು ನಿಯಂತ್ರಣ ಕಳೆದುಕೊಂಡಿತು. ರಾಕೆಟ್ ನಿಯಂತ್ರಣ ಕಳೆದುಕೊಂಡ ಬಳಿಕ ಚೀನಾ ಯಾರಿಗೂ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇನ್ನು ಆ ರಾಕೆಟ್ನ ಒಂದು ಭಾಗ ಹಿಂದೂ ಮಹಾಸಾಗರಕ್ಕೆ ಬಿದ್ದಿರುವುದು ಸಮಾಧಾನದ ವಿಷಯವಾಗಿತ್ತು.
‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣ : ಆರೋಪಿಗಳ ಕಸ್ಟಡಿ ಅಂತ್ಯ, ನಾಳೆ ಕೋರ್ಟ್ ಗೆ ಹಾಜರು
BREAKING NEWS : ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
BIGG NEWS : ಐದು ‘ಮೇಕ್-2 ಯೋಜನೆ’ಗಳಿಗೆ ಸೇನೆ ಅನುಮೋದನೆ, ಸ್ವಾವಲಂಬಿಯತ್ತ ಸಾಗಿದ ಭಾರತ |Make II projects