Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತ-ಪಾಕ್ ನಡುವೆ ಉದ್ವಿಗ್ನತೆ: ಪಿಎಸ್ಎಲ್ 2025ರ ಉಳಿದ ಪಂದ್ಯಗಳನ್ನು ಮುಂದೂಡಿಕೆ

09/05/2025 9:33 PM

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳ ದಿನಾಚರಣೆ: ಹೀಗಿದೆ ‘ಡಿಸಿಎಂ ಡಿಕೆಶಿ’ ವಿದ್ಯಾರ್ಥಿಗಳೊಂದಿಗೆ ಸಂವಾದದ ಪ್ರಮುಖ ಹೈಲೈಟ್ಸ್
KARNATAKA

ಮಕ್ಕಳ ದಿನಾಚರಣೆ: ಹೀಗಿದೆ ‘ಡಿಸಿಎಂ ಡಿಕೆಶಿ’ ವಿದ್ಯಾರ್ಥಿಗಳೊಂದಿಗೆ ಸಂವಾದದ ಪ್ರಮುಖ ಹೈಲೈಟ್ಸ್

By kannadanewsnow0914/11/2024 3:11 PM

ಬೆಂಗಳೂರು: ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಕ್ಕಳ ಸಂವಾದವನ್ನು ನಡೆಸಿದರು.

ಬಿಬಿಎಂಪಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 160 ಮಕ್ಕಳು ಪಾಲ್ಗೊಂಡಿದ್ದರು.

ಮಕ್ಕಳ ದಿನಾಚರಣೆಯಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಕರ್ನಾಟಕದ ನಿರ್ಮಾಣಕ್ಕೆ ಮಕ್ಕಳಿಂದ ಸಲಹೆಗಳನ್ನು ಪಡೆಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಮಕ್ಕಳೊಂದಿಗೆ ಸಂವಾದ ನಡೆಸಿದ್ದು, ಸಂವಾವದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಹಾಗೂ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.

1. ಕೌಸಲ್ಯ, 9ನೇ ತರಗತಿ, ಪಾಲಿಕೆ ಪ್ರೌಢಶಾಲೆ, ಭೈರಸಂದ್ರ:

ಪ್ರಶ್ನೆ: ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಜನಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಇದರಿಂದ ವಾಹನಗಳ ಬಳಕೆಯು ಹೆಚ್ಚಾಗುತ್ತಿದ್ದು, ವಾಯು ಮಾಲಿನ್ಯ ಶಬ್ಧ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಶಾಲೆಗಾಗಲಿ, ನಮ್ಮ ಪೋಷಕರಿಗೆ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲು ತೊಂದರೆಯಾಗುತ್ತಿದೆ. ಏನಾದರೂ ತುರ್ತು ಇದ್ದಾಗ ತುಂಬಾ ತೊಂದರೆಯಾಗುತ್ತಿದೆ ಇದಕ್ಕೆ ನೀವು ಏನು ಕ್ರಮ ಕೈಗೊಳ್ಳುತ್ತೀರ. ದಯವಿಟ್ಟು ಏನಾದರೂ ಪರಿಹಾರ ತಿಳಿಸಿ ?

ಉಪ ಮುಖ್ಯಂತ್ರಿಗಳ ಪ್ರತಿಕ್ರಿಯೆ: ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದ್ದಾರೆ. ದೊಡ್ಡ ಗಾತ್ರದಲ್ಲಿ ಇಡೀ ದೇಶದಲ್ಲಿ ಯಾವ ನಗರವೂ ಬೆಳೆಯುತ್ತಿಲ್ಲ. ಮುಂಬೈ, ಚೆನ್ನೈ, ಕಲ್ಕತ್ತಾಗೆ ಸಮುದ್ರ ಹತ್ತಿರವಾಗಿದೆ. ಸಮುದ್ರದಿಮದ ನಗರಗಳು ಬೆಳೆದು ಅಲ್ಲಿ ವಹಿವಾಡು ವ್ಯವಹಾರ ಹೆಚ್ಚಾಗಿರುತ್ತದೆ. ಆದರೆ, ಇಲ್ಲಿ ಆ ರೀತಿಯ ವಹಿವಾಟಿಲ್ಲ. ನಮ್ಮಲ್ಲಿರುವ ಹವಾಗುಣದಿಂದ, ಇಲ್ಲಿ ಐಟಿ ಹಬ್, ಟೆಕ್ನಿಕಲ್ ಹಬ್, ಮೆಡಿಕಲ್ ಹಬ್ ಆಗಿ ಬೆಳೆದಿದೆ. 20 ವರ್ಷದಿಂದ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಜನಸಂಖ್ಯೆಯಿತತ್ತು. ಇದೀಗ ದ್ವಿಗುಣವಾಗಿ 1.40 ಕೋಟಿ ಜನಸಮಖ್ಯೆಯಾಗಿದೆ. ಅದೇ ರಸ್ತೆಯಿದ್ದು, ವಾಹನಗಳ ಸಂಖ್ಯೆ ಮಾತ್ರ ಹೆಚ್ಚಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸರ್ಕಾರದಿಂದ ಎಷ್ಟೇ ಬಸ್, ಮೆಟ್ರೋ ಹಾಕಿದರು ಕೂಡಾ ಸ್ವಂತ ವವಾಹನಗಳನ್ನೇ ಬಳಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ, ಮೆಟ್ರೋ 3ನೇ ಫೇಸ್ ಮಾಡಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಟ್ರೋ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸಬ್ ಅರ್ಬನ್ ಮಾಡಲಾಗುತ್ತಿದೆ. ಎಷ್ಟೇ ಮೇಲ್ಸೇತುವೆ ಮಾಡುತ್ತಿದ್ದರೂ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ. ಇದೀಗ ಟನಲ್ ರಸ್ತೆ ಕೂಡಾ ಪ್ರಾರಂಭಿಸಲಾಗುತ್ತಿದೆ. ನಗರದಲ್ಲಿ ಬೇರೆ ನಗರಗಳಿಗೆ ಓಲಿಸಿದರೆ ಮಾಲಿನ್ಯ ನಿಯಂತ್ರಣದಲ್ಲಿದೆ.

2. ಕುಮಾರ್, 10ನೇ ತರಗತಿ, ಪಾಲಿಕೆ ಪ್ರೌಡಶಾಲೆ, ಕಸ್ತೂರ ಬಾ ನಗರ:

ಪ್ರಶ್ನೆ: ಎಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆಗಳಲ್ಲಿ ಆಸಕ್ತಿಹೊಂದಿರುತ್ತಾರೆ. ಅದರಲ್ಲಿ ನಾನು ಕೂಡ, ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದೇನೆ. ಆದರೆ ನನ್ನ ಕುಟುಂಬದವರಿಗೆ ನನಗೆ ಕ್ರೀಡೆಯಲ್ಲಿ ತರಬೇತಿಯನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರದ ಕಡೆಯಿಂದ ಯಾವುದಾದರೂ ಪರಿಹಾರ ಇದೆಯೇ?

ಶಿಕ್ಷಣ ಸಚಿವರ ಪ್ರತಿಕ್ರಿಯೆ: ಶಿಕ್ಷಣ ಇಲಾಖೆಯಿಂದ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬೇರೆಯವರ ಸಹಯೋಗದಲ್ಲಿ ಸಣ್ಣ-ಸಣ್ಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಬಂಧ ಕ್ರೀಡಾ ಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋಬಳಿ ಮಟ್ಟದಲ್ಲಿ ಸುಮಾರು 300 ಕರ್ನಾಟಕ ಪಬ್ಲಿಕ್ ಶಾಲೆ ಮಾಡಲು ಮುಂದಾಗಿದ್ದೇವೆ. ಕ್ರೀಡೆ ಕುರಿತು ಮಕ್ಕಳಿಗೆ ನುರಿತ ತರಬೇತಿ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

3. ಲಿಖಿತ, 9ನೇ ತರಗತಿ ಪಾಲಿಕೆಯ ಪ್ರೌಢಶಾಲೆ, ಲಗ್ಗೆರೆ:

ಪ್ರಶ್ನೆ: ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ನೀವು ಅವರಿಗೆ ಏನು ಸಲಹೆ ನೀಡುತ್ತಿದ್ದೀರಿ, ಅವರೊಂದಿಗೆ ಸಲುಗೆಯಿಂದ ಇದ್ದೀರ, ಅಥವಾ ಕಟ್ಟುನಿಟ್ಟಾಗಿ ಇರುತ್ತಿದ್ದೀರಾ, ನೀವು ನಮಗೆ ನೀಡುವ ಸಲಹೆ ಏನು ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ನಾನು ಸಣ್ಣ ವಯಸ್ಸಿನಿಂದಲೇ ರಾಜಕೀಯದಲ್ಲಿ ತೊಡಗಿಕೊಂಡು ಬಂದಿದ್ದೇನೆ. ಆದ್ದರಿಂದ ನನ್ನ ಮಕ್ಕಳಿಗೆ ಸಮಯ ಕೊಡಲು ಆಗಿಲ್ಲ, ಆದರೂ ಅವರನ್ನು ತುಂಬಾ ಪ್ರೀತಿ ಹಾಗು ಕಾಳಜಿ ಮಾಡುತ್ತೇನೆ. ನನ್ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇನೆ. ಆದರೆ, ರಾಜಕೀಯದಲ್ಲಿರುವ ಕಾರಣ ಹೆಚ್ಚು ಸಮಯ ನೀಡಲು ಸಾಧ್ಯವಾಗಿಲ್ಲ. ಮದೆಯುವ ಯಾಗುವ ಮುಂಚೆಯೇ ಮಂತ್ರಿಯಾಗಿದ್ದೆ. ಶಿಕ್ಷಣದ ಬಗ್ಗೆ ನನಗೆ ಹೆಚ್ಚು ಕಾಳಜಿಯಿದ್ದು, ನಗರದ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಸಿಎಸ್‌ಆರ್ ಅಡಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.

4. ಚರಣ್, 7ನೇ ತರಗತಿ, ಪಾಲಿಕೆ ಪ್ರಾಥಮಿಕ ಶಾಲೆª, ನೀಲಸಂದ್ರ:

ಪ್ರಶ್ನೆ: ನೀವು 5 ಗ್ಯಾರಂಟಿಗಳನ್ನು ನೀಡಿದ್ದೀರಾ, ನಮ್ಮ ಅಮ್ಮ ಅದರಲ್ಲೆ ಸಂಚರಿಸುತ್ತಾರೆ. 2000 ಕೂಡಾ ಕೊಡುತ್ತಿದ್ದೀರಾ, ಅಮ್ಮ ಊರಿಗೆ ಹೋದಾಗ ನನ್ನ ಕರೆದುಕೊಂಡು ಹೋಗುವುದಿಲ್ಲ. ಅಕ್ಕ-ತಂಗಿಯನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗೋಸ್ಕರ ಯಾವುದೇ ಯೋಜನೆ ಇಲ್ವ ಸರ್?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ನಿಮ್ಮ ತಾಯಿಗೆ 2000, ಬಸ್ ಉಚಿತ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ನೀನು ಕೇಳಿರುವ ಪ್ರಶ್ನೆಗೆ ಸರ್ಕಾರದಲ್ಲಿ ಚರ್ಚಿಸಿ ಒಂದು ವಯೋಮಿತಿಯವರೆಗೆ ಯೋಚಿಸಿ ಮುಂದೆ ಕ್ರಮವಹಿಸಲಾಗುವುದು.

5. ಅಜಿತ್.ಎಂ, 9ನೇ ತರಗತಿ, ಪಾಲಿಕೆಯ ಪ್ರೌಢಶಾಲೆ ವಿಜಯನಗರ:

ಪ್ರಶ್ನೆ: ಸರ್, ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತೀ ವರ್ಷ ತುಂಬಾ ಮಾಲಿನ್ಯ ಉಂಟಾಗುತ್ತಿದೆ, ಬೆಂಗಳೂರು ನಗರ ಕೂಡ ವಿಪರೀತ ಶಾS, ಅನಿಯಮಿತ ಮಳೆ, ಬರ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಮ್ಮ ನಗರವನ್ನು ಉಳಿಸಲು ಏನು ಕ್ರಮ ಕೈಗೊಳ್ಳುತ್ತಿರಾ ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಕಡೆ ಹೆಚ್ಚು ಗೋಧಿ ಬೆಳೆಯುತ್ತಾರೆ, ಆ ಹುಲ್ಲನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಸುಡುತ್ತಿದ್ದಾರೆ. ಆದ್ದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇಲ್ಲ, ವಾಹನಗಳ ಮಾಲಿನ್ಯ ಅಷ್ಟೇ ಇದ್ದು, ಕಾರ್ಖಾನೆಗಳನ್ನು ಕೂಡಾ ಹೊರ ಭಾಗದಲ್ಲಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟಿçಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ನಮ್ಮ ನಾಗರೀಕರೀಕರು ಎಲೆಕ್ಟರಿಕಲ್ ವಾಹನಗಳಿಗೆ ಅಳವಡಿಸಿಕೊಳ್ಳಬೇಕು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು.

6. ಹರ್ಷ, 5ನೇ ತರಗತಿ, ಪಾಲಿಕೆ ಪ್ರಾಥಮಿಕ ಪಾಠಶಾಲೆ, ಮಾರುತಿ ಮಂದಿರ:

ಪ್ರಶ್ನೆ: ಬಿಬಿಎಂಪಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. ಬುಕ್ಸ್, ಯೂನಿಫಾರ್ಮ್, ಶೂ, ಸಾಕ್ಸ್ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ಪ್ರೈವೇಟ್ ಸ್ಕೂಲ್‌ಗಳಂತೆ ನಮ್ಮ ಬಿಬಿಎಂಪಿ ಶಾಲೆಗಳಲ್ಲಿ ಕ್ವಾಲಿಟಿ ಎಜುಕೇಷನ್ ನೀಡಲು ಯೋಜನೆ ಇದಿಯಾ ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಸರ್ಕಾರಿ, ಪಾಲಿಕೆ ಸೇರಿ ಸುಮಾರು 46000 ಶಾಲೆಗಳಿದ್ದು, ಎಲ್ಲರಿಗೂ ಗುಣಮಟ್ಟ ಶಿಕ್ಷಣ ನೀಡುವುದು ಸರ್ಕಾರದ ಚಿಂತನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕ್ವಾಲಿಟಿ ಎಜುಕೇಷನ್ ನೀಡುತ್ತಿದ್ದಾರೆ. ಯಾರ ಪ್ರಭಾವಕ್ಕೂ ಒಳಗಾಗದೆ ಮೆರಟ್ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ಹೊಸ ಸ್ಕೀಮ್ ತರಲಾಗುತ್ತಿದ್ದು, ಸಿಬಿಎಸ್‌ಸಿ, ಐಸಿಎಸ್‌ಸಿ ಶಿಕ್ಷಣ ನೀಡುವ ಹಾಗೆ ಸರ್ಕಾರಿ ಶಾಲೆಗಳನ್ನು ಹೊಸ ವ್ಯವಸ್ಥೆ ಜಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೊದಲ ರ‍್ಯಾಂಕ್ ಬಂದಿದ್ದು, ಅದರಿಂದಲೇ ನಾವು ಯಾವ ರೀಇತಯ ಶಿಕ್ಷಣ ಸಿಗಲಿದೆ ಎಂಬುದನ್ನು ಗಮನಿಸಬಹುದಾಗಿದೆ. ಶ್ರಮ ಎಲ್ಲಿದಿಯೋ ಅಲ್ಲಿ ಫಲವಿರುತ್ತದೆ.

7. ರಿಚರ್ಡ್, 10ನೇ ತರಗತಿ, ಪಾಲಿಕೆ ಬಾಲಕರ ಪ್ರೌಢಶಾಲೆ, ಜೋಗುಪಾಳ್ಯ:

ಪ್ರಶ್ನೆ: ನಾನು 1 ರಿಂದ 7ನೇ ತರಗತಿಯ ವರೆಗೂ ಖಾಸಗಿ ಶಾಲೆಯಲ್ಲಿ ಓದುತ್ತಿದ್ದೆ. ಆಗ ಸರ್ಕಾರಿ / ಬಿ.ಬಿ.ಎಂ.ಪಿ ಶಾಲೆಗಳ ಬಗ್ಗೆ ಏನೋ ನಿರ್ಲಕ್ಷ್ಯ ಇತ್ತು. ನಮ್ಮ ಪೋಷಕರು ಆರ್ಥಿಕ ಸಮಸ್ಯೆಯಿಂದಾಗಿ ನಾನು ಪಾಲಿಕೆ ಶಾಲೆಗೆ ಸೇರಿಕೊಂಡೆ. ಈಗ ನನಗೆ ಗೋತಾಯ್ತು ಪಾಲಿಕೆ ಶಾಲೆ ಎಷ್ಟು ಚೆನ್ನಾಗಿದೆ ಅಂತಾ ಕ್ವಾಲಿಟಿ ಶಿಕ್ಷಣ ಸಿಗುತ್ತಿದೆ. ನಾನು ಪಾಲಿಕೆಯ ಶಾಲೆಯ ವಿದ್ಯಾರ್ಥಿ ಅಂತ ಹೇಳಕ್ಕೆ ಹೆಮ್ಮ ಆಗುತ್ತಿದೆ. ದಯವಿಟ್ಟು ಬೇರೆ ನನ್ನ ರೀತಿ ಇರುವ ಮಕ್ಕಳಿಗೆ ಈ ವಿಷಯದ ಬಗ್ಗೆ ಅರಿವು ಆಗೋತರಹ ಜಾಹೀರಾತು ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ.

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ, ಉಚಿತ ಸೌಲಭ್ಯ ಸಿಗಲಿದೆ ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗವುದು.

ಶಿಕ್ಷಣ ಸಚಿವರ ಪ್ರತಿಕ್ರಿಯೆ: ಸರ್ಕಾರಿ ಶಾಲೆಯಲ್ಲಿ ಬೆಸ್ಟ್ ಶಿಕ್ಷಕರಿದ್ದಾರೆ, ಎಲ್ಲಾ ಶಿಕ್ಷಕರು ಮೆರಿಟ್ ಮೇಲೆ ಬಂದಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪುಸ್ತಕ, ಸಮವಸ್ತ್ರ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಬಾಳೆ ಹಣ್ಣು ಕೊಡಲಾಗುತ್ತದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 57 ಲಕ್ಷ ಮಕ್ಕಳು ಸರ್ಕಾರಿ ಸೌಲತ್ತನ್ನು ಪಡೆಯುತ್ತಿದ್ದಾರೆ. ಸಾಧನೆ ಮಾಡುವವರೆಲ್ಲಾ ಸರ್ಕಾರಿ ಶಾಲೆಯ ಮಕ್ಕಳೇ ಆಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವಿರುವುದು ನಿಜ, ಅದನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ರಾಜ್ಯದಲ್ಲಿ 46000 ಶಾಲೆಗಳಿದ್ದು, ಶಿಕ್ಷಕರ ಅಭಾವವಿತ್ತು. ಈ ಸಂಬಂಧ 13000 ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 10000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದೇವೆ. ಅಲ್ಲಿ ಹಂತ-ಹಂತವಾಗಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಓದಲು ಹೆಮ್ಮೆ ಇದೆ.

8. ಶಾಲಿನಿ .ಬಿ.ಆರ್, 10ನೇ ತರಗತಿ, ಪಾಲಿಕೆ ಪ್ರೌಢಶಾಲೆ, ಹೇರೋಹಳ್ಳಿ:

ಪ್ರಶ್ನೆ: ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳು ಇಲ್ಲದೇ ಇರುವ ಕಾರಣ ಶಾಲೆಯಿಂದ ಹೊರಗುಳಿಯುತ್ತಾರೆ ಮತ್ತು ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳಲು ಅನೇಕ ಪೋಷಕರು ನಮ್ಮನ್ನು ಮನೆಯಲ್ಲಿಯೇ ಇರಿಸುತ್ತಾರೆ. ಇದರ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳುತ್ತೀರಾ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು, 3 ಎಕರೆ ಪ್ರದೇಶದಲ್ಲಿ 2000 ಕಡೆ ಶಾಲೆ ನಿರ್ಮಾಣ ಮಾಡಲು ಮುಂದಾಗಲಾಗುತ್ತಿದೆ. ಅದನ್ನು ಖಾಸಗಿ ಶಾಲೆಗಳು ದತ್ತು ಪಡೆದುಕೊಳ್ಳಬೇಕು. ನಗರದಲ್ಲಿ ಬಂದು ವಿದ್ಯಾಭಾಸ ಪಡೆಯುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.

9. ನಿರ್ಬಿತಾ, 6ನೇ ತರಗತಿ, ಪಾಲಿಕೆ ಪ್ರಾಥಮಿಕ ಶಾಲೆ:

ಪ್ರಶ್ನೆ: ಖಾಸಗಿ ಶಾಲೆಗಳಲ್ಲಿ ವ್ಯಾನ್, ಬಸ್ ವ್ಯವಸ್ಥೆ ಇರುತ್ತದೆ, ಪಾಲಿಕೆ ಶಾಲೆಗಳಿಗೆ ವ್ಯಸಸ್ಥೆ ಇಲ್ಲವಾ ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಶಾಲೆಗಳಿಗೆ ಹತ್ತಿರವಿರುವ ಮಕ್ಕಳೇ ಬರುವುದರಿಂದ ವಾಹನಗಳ ವ್ಯವಸ್ಥೆ ಮಾಡಿರುವುದಿಲ್ಲ. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಜೊತೆ ಚರ್ಚಿಸಲಾಗುವುದು.

ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರ ಪ್ರತಿಕ್ರಿಯೆ: ಶಾಲೆಗಳಿಗೆ ದಾಖಲಾತಿ ಆಗುವ ಸಮಯದಲ್ಲೇ ಹತ್ತಿರದ ಶಾಲೆಗಳಿಗೆ ಸೇರಲು ಅರಿವು ಮೂಡಿಸಲಾಗುತ್ತಿದೆ. ಕೆಲವು ಮಕ್ಕಳು ದೂರದಿಂದ ಬರಲು ಇಚ್ಛಿಸುತ್ತಿದ್ದಾರೆ. ಹೊರ ವಲಯಗಳಲ್ಲಿ ಪಾಲಿಕೆಯ ಹೆಚ್ಚು ಶಾಲೆಗಳಿಲ್ಲ, ಅಲ್ಲಿಯೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದಾದ ಬಳಿಕ ಈ ಸಮಸ್ಯೆ ಕಡಿಮೆಯಾಗಲಿದೆ. ದಾಖಲಾತಿ ಆಗುವ ವೇಳೆ ಹತ್ತಿರದ ಶಾಲೆಗಳಿಗೆ ದಾಖಲಾತಿ ಮಾಡಲು ಪೋಷಕರಿಗೆ ಮನವಿ ಮಾಡಲಾಗಿದೆ.

10. ವಿದ್ಯಾಸಾಗರ್, 7ನೇ ತರಗತಿ, ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ ಪಂಚಶೀಲನಗರ:

ಪ್ರಶ್ನೆ: ತುಂಬಾ ಮಕ್ಕಳಿಗೆ ಡಾಕ್ಟರ್, ಸ್ಪೋರ್ಟ್ಸ್ ಮನ್, ಇಂಜಿನಿಯರ್ ಆಗಬೇಕೆಂದು ಆಸೆ ಇರುತ್ತದೆ. ಆದರೆ ನನಗೆ ಕರ್ನಾಟಕದ ಸಿ.ಎಂ ಆಗಬೇಕೆಂದು ಆಸೆ ಇದೆ ಅದಕ್ಕೆ ನಾನು ಎನ್ ಓದಬೇಕು, ಎನ್ ಮಾಡಬೇಕು ಸರ್ ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು, ನಿಮ್ಮ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ ಒಳ್ಳೆ ಗುಣಮಟ್ಟ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು. ಮಕ್ಕಳಲ್ಲಿ ಜ್ಞಾನ ಹೆಚ್ಚಾಗಬೇಕೆಂಬ ಉದ್ದೇಶದಿಂದಲೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ನೀವೆಲ್ಲರೂ ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳ ಜೊತೆ ನೇರವಾಗಿ ಹಾಗೂ ದೈರ್ಯವಾಗಿ ಮಾತನಾಡುತ್ತಿದ್ದೀರಾ, ವಿಧಾನಸೌಧನ ಸಮ್ಮೇಳನಾ ಸಭಾಂಗಣವು ದೇಶಕ್ಕೆ ಸಂವಿಧಾನ ತರುವಂತಹ ಜಾಗ, ಶಾಸಕಾಂಗ ಸಭೆ ನಡೆಸುವಂತಹ ಜಾಗ, ನೀವೇ ಇಲ್ಲಿ ಕೂತು, ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳು ಆಗಬೇಕು.

11. ರಾಜೇಶ್ವರಿ, 10ನೇ ತರಗತಿ, ಪಾಲಿಕೆ ಬಾಲಕಿಯರ್ ಪ್ರೌಢಶಾಲೆ, ಶ್ರೀರಾಂಪುರ:

ಪ್ರಶ್ನೆ: ಎಲ್ಲಾ ಶಾಲೆಗಳಲ್ಲಿ 10ನೇ ತರಗತಿ ಮಕ್ಕಳಿಗೆ ಶಿಕ್ಷಣದ ಕುರಿತು ಹೆಚ್ಚು ಮಹತ್ವ ನೀಡುತ್ತಾರೆ. ಕ್ರೀಡೆಗೆ ಹೆಚ್ಚು ಮಹತ್ವ ನೀಡದೆ ಬೋರ್ಡ್ ಎಕ್ಸಾಮ್ ಗೆ ಓದಲು ಪ್ರೋತ್ಸಾಹಿಸುತ್ತಾರೆ. ಅದರ ಬಗ್ಗೆ ಶಿಕ್ಷಣ ಇಲಾಖೆಯ ಕ್ರಮ ಏನು ?

ಶಿಕ್ಷಣ ಸಚಿವರ ಪ್ರತಿಕ್ರಿಯೆ: ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಕ್ಕಳ ಭವಿಷ್ಯ ಬದಲಾಯಿಸುವ ಪ್ರಮುಖ ಘಟ್ಟವಾಗಿರುವುದರಿಂದ, ನೀವು ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ನೀವು ಆಯ್ಕೆ ಮಾಡುವ ವಿಷಯ ಸರಿಯಾಗಿರಬೇಕಾಗಿರುತ್ತದೆ. ಆದ ಕಾರಣ ಶಿಕ್ಷಕರು, ಪೋಷಕರು ಕೂಡಾ ಇದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆಟ ಆಡುವ ಜೊತೆಗೆ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

12. ಮಹೇಶ್ವರಿ, 9 ತರಗತಿ, ಪಾಲಿಕೆ ಪ್ರೌಢಶಾಲೆ, ಮತ್ತಿಕೆರೆ:

ಪ್ರಶ್ನೆ: ನಾನು ಉತ್ತರ ಕರ್ನಾಟಕದಿಂದ ಬಂದಿದ್ದು, ನನ್ನ ತಂದೆ ಇಲ್ಲೇ ಕೆಲಸ ಮಾಡುತ್ತಿದ್ದಾರೆ. ನಾನು ಬಿಬಿಎಂಪಿ ಶಾಲೆಗೆ ಸೇರಿಕೊಂಡಿದ್ದೇನೆ. ಶಿಕ್ಷಣ ಉತ್ತೇಜನ ಹಾಗೂ ಅವರ ಸುರಕ್ಷತೆ ಬಗ್ಗೆ, ಎಷ್ಟೋ ಜನ ತಂದೆ ತಾಯಿ ಹೆಣ್ಣು ಮಕ್ಕಳನ್ನು ಹೊರಗಡೆ ಕಳಿಸುವುದಿಲ್ಲ ಏನೇನು ಕ್ರಮ ತೆಗೆದುಕೊಳ್ಳುತ್ತಿದೀರಾ ?

ಉಪ ಮುಖ್ಯಮಂತ್ರಿಗಳ ಪ್ರತಿಕ್ರಿಯೆ: ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಆಗಲಿ, ಇಡೀ ರಾಜ್ಯ ಒಂದೇ, ಎಲ್ಲಾ ಕಡೆ ಒಂದೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ಕಾನ್ಫಿಡೆನ್ಸ್ ಕಳೆದುಕೊಳ್ಳಬೇಡಿ.

ಈ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ರಮ್ಯಾ, ರಮೇಶ್, ಕರೀಗೌಡ, ಪಾಲಿಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿದ ‘ಡಿಸಿಎಂ ಡಿಕೆಶಿ’: ನಾಳೆಯಿಂದ 3 ದಿನ ‘ಭರ್ಜರಿ ಪ್ರಚಾರ’

ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM1 Min Read

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM1 Min Read

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಜಾವೀದ್ ಬಂಧನ

09/05/2025 9:10 PM1 Min Read
Recent News

BREAKING: ಭಾರತ-ಪಾಕ್ ನಡುವೆ ಉದ್ವಿಗ್ನತೆ: ಪಿಎಸ್ಎಲ್ 2025ರ ಉಳಿದ ಪಂದ್ಯಗಳನ್ನು ಮುಂದೂಡಿಕೆ

09/05/2025 9:33 PM

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM
DRONES, SHELLING ATTACKS ON SEVERAL CITIES IN Jammu, Punjab, Rajasthan

BREAKING VIDEO : ಜಮ್ಮು, ಪಂಜಾಬ್‌, ರಾಜಸ್ಥಾನದ ಹಲವು ನಗರಗಳ ಮೇಲೆ ಮತ್ತೆ ಮತ್ತೆ ಡ್ರೋನ್, ಶೆಲ್‌ ದಾಳಿ

09/05/2025 9:11 PM
State News
KARNATAKA

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

By kannadanewsnow0909/05/2025 9:28 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.…

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಜಾವೀದ್ ಬಂಧನ

09/05/2025 9:10 PM

ಮಂಡ್ಯದಲ್ಲಿ ಕಲುಷಿತ ಆಹಾರ ಪ್ರಕರಣ: ಗೋಕುಲ ವಿದ್ಯಾಸಂಸ್ಥೆಯ ಮಾನ್ಯತೆ‌ ರದ್ದು

09/05/2025 9:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.