Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

ಪುರುಷರ ಗಂಧ-ಸುಗಂಧಗಳ ಬಗ್ಗೆ ಮಹಿಳೆಯರ ಅಸಲಿ ಭಾವನೆ ಏನು? ಇಲ್ಲಿದೆ ರೋಚಕ ಮಾಹಿತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳು ಪೋಷಕರ ಗೌರವ ಹೆಚ್ಚಿಸುವ ಕೆಲಸ ಮಾಡಿ: ದಕ್ಷಿಣ ಕನ್ನಡ ಮೋಗವೀರ ಮಹಾಸಭಾ ಅಧ್ಯಕ್ಷ ಜಯ ಸಿ ಕೋಟ್ಯಾನ್
KARNATAKA

ಮಕ್ಕಳು ಪೋಷಕರ ಗೌರವ ಹೆಚ್ಚಿಸುವ ಕೆಲಸ ಮಾಡಿ: ದಕ್ಷಿಣ ಕನ್ನಡ ಮೋಗವೀರ ಮಹಾಸಭಾ ಅಧ್ಯಕ್ಷ ಜಯ ಸಿ ಕೋಟ್ಯಾನ್

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತು, ಸಂಯಮ ಕಡಿಮೆಯಾಗುತ್ತಿದೆ. ಮಕ್ಕಳು ಸಂಸ್ಕಾರವನ್ನು ಕಲಿಯುವ ಕೆಲಸ ಆಗಬೇಕಿದೆ. ಆ ಮೂಲಕ ಪೋಷಕರ ಗೌರವ ಹೆಚ್ಚಿಸುವಂತ ಕೆಲಸ ಮಾಡುವಂತೆ ಆಗಲಿ ಎಂಬುದಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘ, ಉಡುಪಿಯ ಅಂಬಲವಾಡಿ ಡಾ.ಜಿ ಶಂಖರ್ ಫ್ಯಾಮಿಲಿ ಟ್ರಸ್ಟ್ ಇವರ ನೇತೃತ್ವದಲ್ಲಿ, ಉಡುಪಿ ಮೊಗವೀರ ಯುವ ಸಂಘಟನೆ, ಉಳ್ಳಾಲದ ಮಾರುತಿ ಜನ ಸೇವಾ ಸಂಘ, ಮಾರುತಿ ಯುವಕ ಸಂಘದ ಸಹಯೋಗದೊಂದಿಗೆ ವಾರ್ಷಿಕ ಮಹಾಸಭೆ ಹಾಗೂ ನೋಟ್ ಬುಕ್, ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಮೊಗವೀರ ಸಮಾಜದ ಮುಖಂಡ ನಾಡೋಜ. ಜಿ. ಶಂಕರ್ ಶೈಶೈಕ್ಷಣಿಕವಾಗಿ ನಮ್ಮ ಸಮಾಜದವರನ್ನು ಮುಂಚೂಣಿಯಾಗಿ ತರಬೇಕು. ಅನಾರೋಗ್ಯ ಪೀಡಿತ ಸಮುದಾಯದ ಜನರಿಗೆ ಸಹಾಯ ಮಾಡಬೇಕು ಎಂಬುದಾಗಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನಸಂಘದ ಅಧ್ಯಕ್ಷರಾದಂತ ಜಯ ಸಿ ಕೋಟ್ಯಾನ್ ಮಾತನಾಡಿ,  ಸಾಗರ ತಾಲ್ಲೂಕಿನಲ್ಲಿ 42 ಮೊಗವೀರ ಸಮುದಾಯದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು. 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ತೆಗೆದುಕೊಂಡಿದ್ದಾರೆ. ಅದು ಸಮುದಾಯದ ಮುಖಂಡನಾಗಿ ಹೆಮ್ಮೆ ಪಡುವಂತ ವಿಷಯವಾಗಿದೆ. ಮಕ್ಕಳು ಸಂಸ್ಕಾರವನ್ನು ಕಲಿಯಬೇಕು. ಪೋಷಕರ ಗೌರವ ಹೆಚ್ಚಿಸಬೇಕು. ಓದಿನ ಕಡೆಗೆ ಗಮನ ಕೊಡಬೇಕು. ಮೊಬೈಲ್ ಹುಚ್ಚು ಕಡಿಮೆ ಮಾಡುವ ಕೆಲಸ ಆಗಬೇಕು ಎಂದರು.

ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸಮಾಜವನ್ನು ಒಗ್ಗೂಡಿಸುವಂತ ಕೆಲಸ ಆಗಬೇಕು. ಮೊಗವೀರ ಸಮುದಾಯ ಹಲವೆಡೆ ಹಿಂದುಳಿದಿದೆ. ಸಮಾಜದ ಮುಂಚೂಣಿಗೆ ತರುವಂತ ಕೆಲಸವಾಗಬೇಕು. ಸಮುದಾಯದ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಸಂಘದ ಜೊತೆಗೆ ಗುರ್ತಿಸಿಕೊಳ್ಳಿ. ಇನ್ನೂ ಉನ್ನತ ಮಟ್ಟಕೆ ಬೆಳೆಯುವಂತೆ ಆಶಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಂತ ಸಾಗರದ ಮೊಗವೀರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ್ ಬಿಲಗುಂಜಿ ಅವರು ಮಾತನಾಡಿ, ಪ್ರಾಥಮಿಕ ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಣದ ಬುನಾದಿ ಸರಿಯಾಗಿ ಇರಬೇಕು. ಅನೇಕ ವಿದ್ಯಾರ್ಥಿಗಳು ಹೈಸ್ಕೂಲ್ ಗೆ ಬಂದರೂ ಮಗ್ಗಿ ಬರೋದಿಲ್ಲ. ಅದಾಗಬಾರದು. ಪ್ರಾಥಮಿಕ ಶಾಲಾ ಹಂತದಲ್ಲೇ ಇದನ್ನು ಸರಿಯಾದ ರೀತಿಯಲ್ಲಿ ಕೆಲಿಸಿಕೊಡುವಂತ ಕೆಲಸ ಆಗಬೇಕು. ಬೇಸಿಕ್ ಎಜುಕೇಷನ್ ಸರಿಯಾಗಿರಬೇಕು. ಮಕ್ಕಳ ಪೋಷಕರು ಮನೆಯಲ್ಲಿ ಶಾಲೆಯಿಂದ ಬಂದಂತ ಮಕ್ಕಳಿಗೆ ಅಂದಿನ ಶಾಲಾ ಪಠ್ಯವನ್ನು, ಹೋಂ ವರ್ಕ್ ಮಾಡಿಸುವಂತ ಕೆಲಸ ಮಾಡಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರು ಶಿಕ್ಷಕರ ಜೊತೆಗೆ ಭಾಗಿಯಾಗಬೇಕು. ಮಕ್ಕಳ ಶಿಕ್ಷಣದ ಕಡೆಗೆ ಗಮನ ಕೊಡಿ. ಬೇರೆ ಮಕ್ಕಳನ್ನು ನೋಡಿ ಖುಷಿ ಪಡೋದಲ್ಲ. ನಿಮ್ಮ ಮಕ್ಕಳ ಕಲಿಕೆಯನ್ನು ನೋಡಿ ಖುಷಿ ಪಡಿ ಎಂದರು.

ಈ ವೇಳೆ ಜೂನಿಯರ್ ರಾಜ್ ಕುಮಾರ್ ಅಶೋಕ್ ಬಸ್ತಿ, ಮಾರುತಿ ಯುವಕ ಸಂಘದ ಅಧ್ಯಕ್ಷರಾದ ಕಪಿಲ್ ಉಳ್ಳಾಲ, ಗೌರವಾಧ್ಯಕ್ಷ ರಘುರಾಮ್, ಗುರಿಕಾರ ಶ್ರೀನಿವಾಸ್, ನಗರಸಭೆ ಸದಸ್ಯ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಗರದ ಮೊಗವೀರ ಸಂಘದ ನೂತನ ತಾಲ್ಲೂಕು ಅಧ್ಯಕ್ಷರಾಗಿ ಸತೀಶ್ ಕೆ ಮೊಗವೀರ ಅವರನ್ನು ಸರ್ವಾನುಮತದಿಂದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು. ಮುಂದಿನ ಎರಡು ವರ್ಷಗಳವರೆಗೆ ಸತೀಶ್ ಕೆ ಮೊಗವೀರ ಅವರು ಸಾಗರ ಮೊಗವೀರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!

ಬೆಂಗಳೂರಿನ BTM ಲೇಔಟ್ ನಲ್ಲಿ ನವೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿದ ಸಚಿವ ರಾಮಲಿಂಗಾರೆಡ್ಡಿ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

2 Mins Read

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

2 Mins Read

BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಣೆ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್!

1 Min Read
Recent News

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

ಪುರುಷರ ಗಂಧ-ಸುಗಂಧಗಳ ಬಗ್ಗೆ ಮಹಿಳೆಯರ ಅಸಲಿ ಭಾವನೆ ಏನು? ಇಲ್ಲಿದೆ ರೋಚಕ ಮಾಹಿತಿ!

Handshake: ನಿಮ್ಮ ಹಸ್ತಲಾಘವದ ಶಕ್ತಿಗೂ, ನಿಮ್ಮ ಪ್ರೇಮ ಜೀವನಕ್ಕೂ ಇದೆ ನಿಕಟ ಸಂಬಂಧ: ಅಧ್ಯಯನ

State News
KARNATAKA

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ರಾಜ್ಯದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ನೀಡುವ 2026ನೇ ಸಾಲಿನ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್…

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಣೆ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್!

ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ ಸಿಪಿಐ ನೇಣಿಗೆ ಶರಣು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.