ಮಂಡ್ಯ :- ಕಲುಷಿತ ಆಹಾರ ಸೇವನೆಯಿಂದಾಗಿ 38 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು.
ಈ ಘೋರ ಘಟನೆಯಿಂದಾಗಿ ಮೇಘಾಲಯ ಮೂಲದ ಕೇರ್ ಲಾಂಗ್ (14) ಮತ್ತು ನಾಮೀಬಂತೈ (12)ಎಂಬ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನುಳಿದ
38 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ದಾಖಲಿಸಲಾಗಿತ್ತು.
ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಘಾಲಯದ 22 ವಿದ್ಯಾರ್ಥಿಗಳು ಹಾಗೂ ಮಳವಳ್ಳಿಯ 7 ವಿದ್ಯಾರ್ಥಿಗಳು ಒಟ್ಟು 29 ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಡಿಸ್ಚಾಜ್೯ ಮಾಡಲಾಗಿದೆ.
*ಘಟನೆ ವಿವರ*
ಮಳವಳ್ಳಿಯ ಕಲ್ಯಾಣ ಮಂಟಪದಲ್ಲಿ ಉದ್ಯಮಿಯೊಬ್ಬರು ಹೋಳಿ ಹಬ್ಬಕ್ಕೆ ಊಟ ತಯಾರಿಸಿ ಉಳಿದಿದ್ದ ಆಹಾರವನ್ನು ( ಗೋಕುಲ ವಿದ್ಯಾಸಂಸ್ಥೆ ) ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ನೀಡಲಾಗಿತ್ತು.
ಆಹಾರ ತಿನ್ನುತ್ತಿದ್ದಂತೆ ಮಕ್ಕಳಲ್ಲಿ ವಾಂತಿ ಭೇದಿ ಹೆಚ್ಚಾದ ಪರಿಣಾಮ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.
ಇನ್ನು ಕಳೆದ ಒಂದು ವಾರದಿಂದ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಘಾಲಯದ 22 ವಿದ್ಯಾರ್ಥಿಗಳು ಹಾಗೂ ಮಳವಳ್ಳಿಯ 7 ವಿದ್ಯಾರ್ಥಿಗಳು ಒಟ್ಟು 29 ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾಜ್೯ ಮಾಡಲಾಯಿತು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
*ವರದಿ : ಗಿರೀಶ್ ರಾಜ್ ಮಂಡ್ಯ*