ಮಂಡ್ಯ: ರಾಜ್ಯದಲ್ಲಿ ಇನ್ನೂ ಬಾಲ ಕಾರ್ಮಿಕ ಪದ್ದತಿ ಜೀವಂತವಾಗಿದೆ. ಇಲ್ಲೊಂದು ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
BIGG NEWS : ಬಿಆರ್ ಎಸ್ ಶಾಸಕರ ಖರೀದಿ ಪ್ರಕರಣ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೆ ಎಸ್ ಐಟಿ ನೋಟಿಸ್
ಕಳಪೆ ಕಾಮಗಾರಿಯನ್ನ ಪ್ರಶ್ನಿಸಿ ಗ್ರಾಮಸ್ಥರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಎಚ್ಚೆತ್ತ ಕಾಂಟ್ರ್ಯಾಕ್ಟರ್ ಮತ್ತೆ ರಸ್ತೆಗೆ ಡಾಂಬರೀಕರಣ ಮಾಡಿಸಿದ್ದಾರೆ. ಈ ವೇಳೆ ಬಾಲಕ ಡಾಂಬರೀಕರಣ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ನಾಯಕನಹಳ್ಳಿಯಲ್ಲಿ ಕಾಂಟ್ರ್ಯಾಕ್ಟರ್ ಮಾಡಿದ ಎಡವಟ್ಟಿನಿಂದ ಜನರು ಆಕ್ರೋಶಗೊಂಡಿದ್ದರು. ಹೀಗಾಗಿ ಮೊಬೈಲ್ ನಲ್ಲಿ ರಸ್ತೆಯ ಅವ್ಯವಸ್ಥೆಯನ್ನ ಸೆರೆ ಹಿಡಿದಿದ್ದರು.
BIGG NEWS : ಬಿಆರ್ ಎಸ್ ಶಾಸಕರ ಖರೀದಿ ಪ್ರಕರಣ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೆ ಎಸ್ ಐಟಿ ನೋಟಿಸ್
ಯಾವಾಗ ನಾಯಕನಹಳ್ಳಿ ಗ್ರಾಮಸ್ಥರು ಆಕ್ರೋಶವನ್ನ ವ್ಯಕ್ತಪಡಿಸಿದರೋ ತಡ ಮಾಡದ ಕಂಟ್ರ್ಯಾಕ್ಟರ್ ಈಗ ಮತ್ತೆ ರಸ್ತೆಗೆ ಹೊಸದಾಗಿ ಡಾಂಬಾರು ಹಾಕುತ್ತಿದ್ದಾರೆ. ಗ್ರಾಮಸ್ಥರ ಆಗ್ರಹದಂತೆ ಈಗ ಡಾಂಬಾರು ಹಾಕೋದ್ರ ಮೂಲಕ ತನ್ನ ತಪ್ಪನ್ನ ಸರಿ ಪಡಿಸಿಕೊಳ್ಳುತ್ತಿದ್ದಾರೆ. ಆದ್ರೆ ತಪ್ಪು ಸರಿ ಮಾಡಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.