ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುಹಳ್ಳಿ ಗ್ರಾಮದಲ್ಲಿ ನೀರು ತಿಂಬಿದ್ದ ಬಕೆಟ್ ಗೆ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗು ತಾರಾ ದಂಪತಿಯ 10 ತಿಂಗಳ ಮಗಳು ಅನುಸಾವ್ಯ ಮೃತಪಟ್ಟಿದೆ.
ಮಗು ಮನೆ ಮುಂದೆ ಆಟವಾಡುತ್ತಿದ್ದಾಗ ಪಕ್ಕದಲ್ಲೇ ನೀರು ತುಂಬಿಟ್ಟಿದ್ದ ಬಕೆಟ್ಗೆ ಬಿದ್ದಿದೆ. ತಕ್ಷಣ ಯಾರೂ ಗಮನಿಸಿರಲಿಲ್ಲ. ಆಟವಾಡುತ್ತಿದ್ದ ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಿದಾಗ ಬಕೆಟ್ನೊಳಗೆ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಪೋಷಕರು ಮಗುವನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಸಾವನ್ನಪ್ಪಿದೆ. ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.