ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರ ಘಟನೆ ನಡೆದಿದ್ದು, ಭದ್ರಾ ನದಿಯಲ್ಲಿ ಮುಳುಗಿ ಐಟಿ ಕಂಪನಿಯ ಉದ್ಯೋಗಿ ಸಾವನಪ್ಪಿದ್ದಾನೆ. ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಅಭಿಷೇಕ್ (27) ಎಂಬಾತ ಸಾವನಪ್ಪಿದ್ದಾನೆ. ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಗದಗ ಮೂಲದ ಅಭಿಷೇಕ್ ಎಂಬಾತ ಸ್ನೇಹಿತನ ಮದುವೆಗಾಗಿ ಬಂದಿದ್ದ ಸ್ನೇಹಿತರ ಜೊತೆಗೆ ಹೋಂ ಸ್ಟೇನಲ್ಲಿ ಅಭಿಷೇಕ್ ವಾಸ್ತವ್ಯ ಹೂಡಿದ್ದ. ಬಳಿಕ ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದಾಗ ಮುಳುಗಿ ಸಾವನಪ್ಪಿದ್ದಾನೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಅಭಿಷೇಕ್ ಕೆಲಸ ಮಾಡುತ್ತಿದ್ದ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಅಭಿಷೇಕ್ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ








