ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಪರಿಸರದಲ್ಲಿ ಇಂದು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಕುರುಚಲು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ. ಉರುಸ್ ಆಚರಣೆಗೆಂದು ಹೊರ ಜಿಲ್ಲೆಗಳಿಂದ ಬಂದವರು ಪೀಠದ ಆಸು ಪಾಸಿನ ಗುಡ್ಡದ ತಪ್ಪಲಲ್ಲಿ ಟೆಂಟ್ ಹಾಕಿಕೊಂಡು ಅಡುಗೆ ಮಾಡುತ್ತಿದ್ದು ಇದರಿಂದಲೇ ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಜನರೇ ಹತ್ತಿರ ಬಂತು ಡೆಡ್ ಲೈನ್: ಏ.11ರೊಳಗೆ ‘ವನ್ಯಜೀವಿ ವಸ್ತು’ಗಳಿದ್ರೆ ಸೆರೆಂಡರ್ ಮಾಡಿ
ಇಲ್ಲಿನ ಪ್ರಸಿದ್ದ ಬಾಬಾಬುಡನ್ ಇನಾಂ ದತ್ತಾತ್ರೇಯ ಪೀಠದ ಸುತ್ತಮುತ್ತಲು ಉರುಸ್ ಆಚರಣೆಗೆ ಬೇರೆ ಬೇರೆ ಕಡೆಯಿಂದ ಜನರು ಆಗಮಿಸಿದ್ದರು. ಅಡಿಗೆ ಮಾಡುತ್ತಿರುವ ಸಂದರ್ಭದಲ್ಲಿ ಗಾಳಿಗೆ ತೂರಿ ಸಾವಿರಾರು ಎಕರೆ ಕುರುಚಲು ಹಾಗೂ ಹುಲ್ಲುಗಾವಲು ಪ್ರದೇಶ ಸುಟ್ಟು ಕರಕಲಾಗಿದೆ ಎಂದು ಆರೋಪಿಸಲಾಗುತ್ತಿದೆ.
‘ಕಿಡ್ನಿ’ ಕಾಯಿಲೆಗಳನ್ನ ಮೊದಲೇ ಗುರುತಿಸೋದು ಹೇಗೆ.? ಚಿಕಿತ್ಸೆ ಹೇಗೆ.? ಇಲ್ಲಿದೆ, ಮಾಹಿತಿ
ಬೆಂಕಿ ಕಾಣಿಸಿಕೊಂಡು ಗಾಳಿಯ ಜೊತೆಯಲ್ಲೇ ವೇಗವಾಗಿ ಗುಡ್ಡವನ್ನು ಆವರಿಸಿಕೊಳ್ಳುವಾಗ ಅಲ್ಲಿದ್ದ ಕೆಲವರು ಜೀವಭಯದಿಂದ ಓಡಿದ್ದಾರೆ. ಟೆಂಟ್ನಲ್ಲಿದ್ದ ಬಟ್ಟೆ, ಬರೆ ಇನ್ನಿತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಸಾವು, ನೋವು ಸಂಭವಿಸಿಲ್ಲ. ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸುವ ಕಾರ್ಯ ಕೈಗೊಂಡಿದೆ.
ಶ್ರೀರಾಮನನ್ನು ಬೀದಿಗೆ ತಂದ ಬಿಜೆಪಿ ‘ಬ್ರಿಟಿಷ್ ಜನತಾ ಪಾರ್ಟಿ’, : ಸಚಿವ ಮಧು ಬಂಗಾರಪ್ಪ ವಾಗ್ದಾಳಿ
ಜಿಲ್ಲಾಡಳಿತ ಉರುಸ್ ಹಿನ್ನೆಲೆಯಲ್ಲಿ ಎಲ್ಲಾ ಅನುಕೂಲವನ್ನು ಮಾಡಿಕೊಟ್ಟಿದ್ದರೂ ಬೇಕಾಬಿಟ್ಟಿಯಾಗಿ, ಅಕ್ರಮವಾಗಿ ಟೆಂಟ್ಗಳನ್ನು ನಿರ್ಮಿಸಿಕೊಂಡಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ಗಿರಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.