ಚಿಕ್ಕಮಗಳೂರು : ಇದೀಗ ರಾಜ್ಯದಲ್ಲಿ ವರುಣ ಅಬ್ಬರಿಸುತ್ತಿದ್ದು, ರೈತರು ಸಹಜವಾಗಿ ಮಳೆ ಆಗುತ್ತಿದರಿಂದ ಖುಷಿಗೊಂಡಿದ್ದು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಇನ್ನೊಂದೆಡೆ ಜಲಪಾತಗಳು ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಚಿಕ್ಕಮಂಗಳೂರಿನಲ್ಲಿ ಜಲಪಾತದಲ್ಲಿ ಮೋಜು ಮಸ್ತಿ ಮಾಡುವ ಪ್ರವಾಸಿಗರ ವಿರುದ್ಧ ಇದೀಗ FIR ದಾಖಲಾಗಿದೆ.
ಹೌದು ಜಲಪಾತದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಪ್ರವಾಸಿಗರ ವಿರುದ್ಧ FIR ದಾಖಲಾಗಿದೆ. ಪ್ರವಾಸಿಗರು ಮೋಜಿನಾಟದಲ್ಲಿ ತೊಡಗಿದ್ದ 6 ಜನರು, ಮೈದಾಡಿ ರಸ್ತೆಯಲ್ಲಿರುವ ಕಿರು ಜಲಪಾತದಲ್ಲಿ ಮೋಜು ಮಸ್ತಿ ಮಾಡಿದ್ದರು.ಇದೀಗ ಮಂಗಳೂರು ಮೂಲದ 6 ಪ್ರವಾಸಿಗರ ವಿರುದ್ಧ ಇದೀಗ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಮೂಡಿಗೆರೆ ತಾಲೂಕಿನಲ್ಲಿ 5 ಕುಡಿದ ಮತ್ತಿನಲ್ಲಿ ಯುವಕರು ಕಿ.ಮೀ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಬಾರಿ ಓಡಾಟ ಮಾಡಿದ್ದು, ಚಾರ್ಮಾಡಿ ಘಾಟ್, ದೇವರಮನೆ ಗುಡ್ಡದಲ್ಲಿ ರಾಣಿ ಝರಿ ಬಳಿಕಿರಿಕ್ ಮಾಡಿಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ರಾಣಿಝರಿ ಬಳಿ ಈ ಒಂದು ಘಟನೆ ನಡೆದಿದೆ. ಬೈಕ್ ನ ಎಕ್ಸ್ಲೇಟರ್ ರೈಸ್ ಮಾಡಿ ಕರ್ಕಶ ಶಬ್ದವನ್ನು ಮಾಡಿ ಓಡಾಟ ನಡೆಸಿದ್ದಾರೆ. ಕುಡಿದು ಒಬ್ಬರಾದ ಮೇಲೆ ಒಬ್ಬರು ಬೈಕ್ ರೈಡ್ ಮಾಡಿದ್ದಾರೆ. ರೀಲ್ಸ್ ಹುಚ್ಚಿಗಾಗಿ ರಸ್ತೆ ಸಂಪೂರ್ಣವಾಗಿ ಹಾಳು ಮಾಡಿದ್ದಾರೆ.