ಚಿಕ್ಕಮಗಳೂರು : ಇತ್ತೀಚಿಗೆ ಈ ಹೃದಯಘಾತ ಎನ್ನುವುದು ಜ್ವರ, ಕೆಮ್ಮು, ನೆಗಡಿ ಎಂಬಂತೆ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ವಯಸ್ಸಿನ ಅಂತರವಿಲ್ಲದೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಹೃದಯಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಚಿಕ್ಕಮಂಗಳೂರಿಗೆ ಪ್ರವಾಸಿಗರನ್ನು ಕರೆ ತಂದಿದ್ದ ಟಿಟಿ ವಾಹನದ ಚಾಲಕ ಹೃದಯಾಘಾತದಿಂದ ಸಾವನಪ್ಪಿದ್ದಾನೆ.
ಹೌದು ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆ ತಂದಿದ ಟಿಟಿ ವಾಹನದ ಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಸೋಮನಹಳ್ಳಿಯ ನಿವಾಸಿ ಅವಿನಾಶ್ (25) ಮೃತ ಚಾಲಕ ಎಂದು ಹೇಳಲಾಗುತ್ತಿದೆ. ತಾನಾರಿಯ ಹೋಂ ಸ್ಟೇನಲ್ಲಿದ್ದಾಗ ಚಾಲಕ ಅವಿನಾಶಗೆ ಹೃದಯಾಘಾತವಾಗಿತ್ತು.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ತಾನಾರಿಯ ಹೋಂ ಸ್ಟೇನಲ್ಲಿ ಹೃದಯಘಾತವಾಗಿತ್ತು. ಕೂಡಲೇ ಅವಿನಾಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಚಾಲಕ ಅವಿನಾಶ್, ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.