ಚಿಕ್ಕಮಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಜಾಮೀನು ರಹಿತ ವಾರಂಟ್ ಜಾರಿಮಾಡಿದೆ. ಈ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
BIG NEWS: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಗೆಹ್ಲೋಟ್ ಸಜ್ಜಾಗುತ್ತಿದ್ದಂತೆ ರಾಜಸ್ಥಾನದಲ್ಲಿ ಬಿರುಸಿನ ಮಾತುಕತೆ
ಅವರು ಅನಾರೋಗ್ಯದ ಸಮಸ್ಯೆ ಹೇಳಿ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಆದರೆ ಅಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕುರಿತು ಪತ್ರಿಕಾ ವರದಿಯನ್ನು ದೂರುದಾರ ಹೂವಪ್ಪಗೌಡ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೀಗಾಗಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ನೀಡಿದ್ದು, ಅಕ್ಟೋಬರ್ 10 ರಂದು ಎಂ.ಪಿ.ಕುಮಾರಸ್ವಾಮಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿದೆ. ಒಟ್ಟಾರೆಯಾಗಿ ಅಂದು ಶಾಸಕ ನ್ಯಾಯಾಲಕ್ಕೆ ಹಾಜರಾಗ್ತಾರಾ ಅಥವಾ ನೆಪ ಹೇಳುತ್ತಾರೋ ಎಂಬುವದನ್ನು ಕಾದು ನೋಡಬೇಕಿದೆ.