ಚಿಕ್ಕಬಳ್ಳಾಪುರ : ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳು ಇದ್ದರು ಸಹ ಆತನಿಗೆ ಪತ್ನಿಯೊಂದಿಗೆ ವಿಕೃತವಾಗಿ ಕಾಮದಾಟವಾಡುವ ಮನಸ್ಥಿತಿ.ಕಟ್ಟಿಕೊಂಡ ಗಂಡನೇ ಪತ್ನಿಯ ಬಳಿ ವಿಕೃತಿ ಮೆರೆದಿರುವ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪಿಲೇಚರ್ಸ್ ಕ್ವಾಟ್ರಸ್‍ನಲ್ಲಿ ನಡೆದಿದೆ.
ಹೌದು ಎಸ್.ಮೊಸಿನ್ ಪಾಷ(39) ಎಂಬಾತ ಹೆಂಡತಿಯ ಜೊತೆ ವಿಕೃತವಾಗಿ ವರ್ತಿಸಿದ್ದು, ಆತನ ಕಿರುಕುಳಕ್ಕೆ ಆತನ ತಾಯಿ ಕೂಡ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಇನ್ನು ಇವರಿಗೆ ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳಿವೆ. ಆದರೂ ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ.
ಇನ್ನು ಲೈಂಗಿಕ ಜಾಲತಾಣಗಳ ವೀಡಿಯೋ, ಪೋಟೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು, ಹೀಗೆ ಮಾಡು ಎಂದು ವಿಕೃತ ಲೈಂಗಿಕ ಕಿರುಕುಳ ನೀಡುತ್ತಿದ್ದ.ಇಷ್ಟಾದರೂ ಸಾಲದೆಂಬಂತೆ ಪತ್ನಿಯ ಏಕಾಂತ ಪೋಟೋ, ವೀಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ತನ್ನ ವಿಕೃತ ಲೈಂಗಿಕ ಕಿರುಕುಳಕ್ಕೆ ಪತ್ನಿ ಸಾಥ್ ನೀಡುತ್ತಿಲ್ಲವೆಂದು ಪತ್ನಿಯ ಎದುರಲ್ಲೆ ಬೇರೆ ಮಹಿಳೆಯ ಜೊತೆ ವೀಡಿಯೋ ಕಾಲ್ ಮಾಡಿ ವಿಕೃತ ಆನಂದ ಪಡುತ್ತಿದ್ದ, ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಕೊಲೆಯತ್ನ ಮಾಡಿದ ಘಟನೆ ನಡೆದಿದೆ.ಇನ್ನು ಮೊಸಿನ್‍ಪಾಷ ಪತ್ನಿ, ಈತನ ಅತಿಯಾದ ಲೈಂಗಿಕ ಕಿರುಕುಳಕ್ಕೆ ಸ್ಪಂದಿಸದೇ ಇದ್ದಾಗ, ಪತ್ನಿಯ ಋತುಚಕ್ರಕ್ಕೂ ಪಾಪಿ ಅಡ್ಡಿಪಡಿಸುತ್ತಿದ್ದನಂತೆ. ಪತ್ನಿ ಋತುಚಕ್ರವಾದಾಗ ತನ್ನ ಅಭಿಲಾಷೆ ತೀರಿಸುವಂತೆ ಕಿರುಕುಳ ಕೊಡುತ್ತಿದ್ದನಂತೆ.
ಇನ್ನು ಈ ಘಟನೆಗೆ ಸಂಬಂಧಿಸಿ ಮಹಿಳೆಯ ಬಳಿ ಬಿಎನ್‍ಎಸ್ ಕಾಯ್ದೆ 75, 77, 118(2), 351(2), 351(3) ರೆ/ವಿ 3(5) ರೀತ್ಯಾ ಶಿಡ್ಲಘಟ್ಟ ನಗರಠಾಣೆ ಪಿಎಸ್‍ಐ ವೇಣುಗೋಪಾಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.