ಚಿಕ್ಕಬಳ್ಳಾಪುರ : ಯುವಕ ಮತ್ತು ಯುವತಿಯರಿಬ್ಬರು ನೀರು ಕೇಳುವ ನೆಪದಲ್ಲಿ ಬಂದು ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿ ಸರಗಳ್ಳತನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುದ್ದಹಳ್ಳಿ ಗೇಟ್ ಬಳಿ ಈ ಒಂದು ಕೃತ್ಯ ನಡೆದಿದೆ.
ನಿರ್ಮಾಣ ಹಂತದ ತೋಟದ ಮನೆಯಲ್ಲಿ ಇದ್ದಂತಹ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಕಳವಾರ ಗ್ರಾಮದ ಅಂಜಿನಮ್ಮ ಎಂಬ ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಯುವಕ ಯುವತಿ ಸರಗಳ್ಳತನ ಮಾಡಿದ್ದಾರೆ. ವೃದ್ಧೆಯ ಬಳಿ ಇದ್ದಂತಹ 50 ಗ್ರಾಂ ತೂಕದ ಚಿನ್ನ ಸರವನ್ನು ಕದ್ದು ಇಬ್ಬರು ಪರಾರಿಯಾಗಿದ್ದಾರೆ.