ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಬಿದ್ದು ಒದ್ದಾಡುತ್ತಿದ್ದರು, ಆಂಬುಲೆನ್ಸ್ ಹಾಗು ಪೊಲೀಸರು ಸ್ಥಳಕ್ಕೆ ಬಾರದೆ ಇದ್ದಿದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿ ಮೈಲುಗಲ್ಲಿಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಇಶಾ ಫೌಂಡೇಶನ್ ನಿಂದ ಬೆಂಗಳೂರು ಕಡೆಗೆ ಯುವಕ ಯುವತಿ ತೆರಳುತ್ತಿದ್ದರು. ಅಪಘಾತದ ಸ್ಥಳಕ್ಕೆ ಸಂಚಾರಿ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಕೂಡ ಬಂದಿಲ್ಲ ಗಂಟೆಗಳ ಬಳಿಕ ಇಬ್ಬರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.








