ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಲೆ ಇವೆ. ಇದೀಗ ಡ್ರಾಪ್ ಕೊಡುವ ನೆಪದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಓರ್ವ ಯುವಕ ಅತ್ಯಚಾರಕ್ಕೆ ಯತ್ನಿಸಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಬಂಧಿತತನ್ನು ಪೋಲಕುಂಟಹಳ್ಳಿ ನಿವಾಸಿ ಶ್ರೀಕಾಂತ್ ಎಂದು ತಿಳಿದುಬಂದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಿದ್ಯಾರ್ಥಿನಿಯರು ವಾಪಸಾಗುವಾಗ ಘಟನೆ ನಡೆದಿದ್ದು, ಸದ್ಯ ಕೃತ್ಯ ಯತ್ನಿಸಿದ ಶ್ರೀಕಾಂತ್ ನನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಇಬ್ಬರು ವಿದ್ಯಾರ್ಥಿನಿಯರನ್ನ ಪೆರೇಸಂದ್ರ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ತಡರಾತ್ರಿ ಪೇರಸಂದ್ರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವಾಗ ಆರೋಪಿ ಶ್ರೀಕಾಂತ್ ನಿಮ್ಮಿಬ್ಬರಿಗೆ ಡ್ರಾಪ್ ಕೊಡುತ್ತೇನೆ ಎಂದು ಹೇಳಿ ಹೆದ್ದಾರಿ ಬಿಟ್ಟು ಅರಣ್ಯ ದಾರಿಯಲ್ಲಿ ಸಾಗಿದ್ದಾನೆ.ಈ ವೇಳೆ ವಿದ್ಯಾರ್ಥಿನಿಯರು ಆತನಿಂದ ತಪ್ಪಿಸಿಕೊಂಡು 112 ಪೊಲೀಸರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದಾರೆ.ತಕ್ಷಣ ಅಲರ್ಟ್ ಆದ ಪೊಲೀಸ್ ವಿದ್ಯಾರ್ಥಿನಿಯರನ್ನು ರಕ್ಷಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.