ಚಿಕ್ಕಬಳ್ಳಾಪುರ : ಗಾಂಜಾ ಸಾಗಿಸುತ್ತಿದ್ದ ತಂದೆ ಮಗಳು ಮೊಮ್ಮಗ ಸೇರಿದಂತೆ ಒಟ್ಟು ಐವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಡಿಕೆರೆ ಬಳಿ ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 35 ಕೆ.ಜಿ ಗಾಂಜಾ XUV 500 ಕಾರು ಜಪ್ತಿ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಸೆನ್ ಠಾಣೆಯ ಪೊಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಲ್ಲಿಗುಂಟೆಯ ಮಾರಪ್ಪ ಗರಿಗೆರೆಪಾಳ್ಯ ನಿವಾಸಿಗಳಾದ ತಾಯಿ ದೇವಮ್ಮ ಮಗ ಅಂಜಿ ಎನ್ನುವವರನ್ನು ಬಂಧಿಸಲಾಗಿದೆ. ಆಂಧ್ರದ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದರು. ಬಂಧಿತರು ಗಾಂಜಾ ಮಾರಾಟವನ್ನೇ ವೃತ್ತಿಯಾಗಿಸಿಕೊಂಡಿದ್ದರು.