ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜ. 7 ರಿಂದ 14 ರವರೆಗೆ ಚಿಕ್ಕಬಳ್ಳಾಪುರ ಉತ್ಸವ ಆಚರಣೆ ಹಿನ್ನೆಲೆ ಭರ್ಜರಿ ಸಿದ್ದತಾ ಕಾರ್ಯ ನಡೆಸಲಾಗುತ್ತಿದೆ. ಇದೀಗ ಖುದ್ದು ರಾಜ್ಯದ ಆರೋಗ್ಯ ಸಚಿವರೇ ಕೈನಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ.
BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್ ವಾಗ್ದಾಳಿ
ಈ ಭಾರಿ ನಡೆಸಲಾಗುವ ಚಿಕ್ಕಬಳ್ಳಾಪುರ ಉತ್ಸವವನ್ನು ಮೈಸೂರು ದಸರಾ ಮತ್ತು ಹಂಪಿ ಉತ್ಸವ ಮಾದರಿಯಲ್ಲಿ ನಡೆಸಲಾಗುತ್ತದೆ. ಚಿಕ್ಕಬಳ್ಳಾಪುರ ಉತ್ಸವಕ್ಕೆ ಕರ್ನಾಟಕದ ಹಲವು ಭಾಗದ ಜನರು ಆಗಮಿಸುವ ಹಿನ್ನಲೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.
ಇದೀಗ ನಗರದ ಎಲ್ಲಾ ರಸ್ತೆಗಳನ್ನು ಸ್ವಚ್ಚತೆ ನಡೆಸಲಾಗುತ್ತಿದ್ದು, ಆರೋಗ್ಯ ಸಚಿವ ಡಾ. ಸುಧಾಕರ್ ಕೈನಲ್ಲಿ ಪೊರಕೆ ಹಿಡಿದುಕೊಂಡು ಗುಡಿಸಲು ಮುಂದಾಗಿದ್ದಾರೆ. ಈ ಕುರಿತ ಫೋಟೋ ವೈರಲ್ ಕೂಡಾ ಆಗುತ್ತಿದೆ.
BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್ ವಾಗ್ದಾಳಿ
ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್ ಎಮ್ ನಾಗರಾಜ್, ಜಿಪಂ ಸಿಇಓ ಪಿ ಶಿವಶಂಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ಸೇರಿದಂತಯೆ ಹಲವ ಅಧಿಕಾರಿಗಳು ಸಾಥ್ ನೀಡಿದ್ದಾರೆ
BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್ ವಾಗ್ದಾಳಿ