ರಾಯ್ಪುರ(ಛತ್ತೀಸ್ಗಢ): 45 ಲಕ್ಷ ರೂ. ಹಣವಿರುವ ಇರುವ ಬ್ಯಾಗೊಂದು ಶನಿವಾರ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಿಕ್ಕಿದ್ದು, ಆ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದಿದೆ.
ನವ ರಾಯ್ಪುರದ ಕಯಾಬಂಧ ಪೋಸ್ಟ್ಗೆ ನೀಮಿಸಲಾದ ಟ್ರಾಫಿಕ್ ಕಾನ್ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ನಿನ್ನೆ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ಅನ್ನು ಕಂಡುಕೊಂಡಿದ್ದಾರೆ. ನಂತ್ರ ಬ್ಯಾಗ್ಅನ್ನು ಪರಿಶೀಲಿಸಿದಾಗ ಅದರೊಳಗೆ ಸುಮಾರು 2000 ಮತ್ತು 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಈ ವೇಳೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ಅನ್ನು ನೀಡಿದ್ದಾರೆ. ಅಲ್ಲಿ ಬ್ಯಾಗ್ಅಲ್ಲಿದ ಹಣವನ್ನು ಲೆಕ್ಕ ಹಾಕಿದಾಗ ಬರೋಬ್ಬರಿ 45 ಲಕ್ಷ ರೂ. ಹಣವಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಹೇಳಿದ್ದಾರೆ.
ಈ ಪ್ರಾಮಾಣಿಕತೆಗಾಗಿ ಸಿನ್ಹಾ ಅವರಿಗೆ ಹಿರಿಯ ಅಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ. ಇನ್ನೂ, ನಗದು ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Breaking news: ಕ್ಯಾಲಿಫೋರ್ನಿಯಾದ ಯೊಸೆಮೈಟ್ ಬಳಿ ಭೀಕರ ಕಾಡ್ಗಿಚ್ಚು… ತುರ್ತು ಪರಿಸ್ಥಿತಿ ಘೋಷಣೆ