ನವದೆಹಲಿ: ಲೋಕಸಭಾ ಚುನಾವಣೆಗೆ ( Lok Sabha Election 2024) ದಿನಾಂಕ ಪ್ರಕಟವಾಗಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆದು, ಜೂನ್.4ರಂದು ಫಲಿತಾಂಶ ಪ್ರಕಟವಾಗಲಿದೆ. ಸೋ ನೀವು ಮತದಾನಕ್ಕೆ ರೆಡಿಯಾಗಿದ್ದರೇ ನಿಮ್ಮ ಹೆಸರು ವೋಟರ್ ಲೀಸ್ಟ್ ನಲ್ಲಿ ( Voter List ) ಇದ್ಯಾ ಅಂತ ಒಂದೇ ಒಂದು ನಿಮಿಷದಲ್ಲಿ ಈ ವೆಬ್ ಸೈಟ್ ಗೆ ಭೇಟಿ ನೀಡಿ, ಚೆಕ್ ಮಾಡಬಹುದಾಗಿದೆ.
ಚುನಾವಣಾ ಆಯೋಗದಿಂದ ( Election Commission ) ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಲೋಕಸಭಾ ಚುನಾವಣೆ ಘೋಷಣೆಯ ನಂತ್ರವೂ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ಯಾ ಅಂತ ಸರ್ಚ್ ಮಾಡೋದಕ್ಕೆ https://electoralsearch.eci.gov.in/ ಗೆ ಭೇಟಿ ನೀಡಿ, ಹೆಸರು, ನಿಮ್ಮ ಜಿಲ್ಲೆ, ತಾಲೂಕು, ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಬಹುದಾಗಿದೆ.
ಈ ಮೇಲ್ಕಂಡ ವೆಬ್ ಸೈಟ್ ನಲ್ಲಿ ಒಂದೇ ಒಂದು ನಿಮಿಷದಲ್ಲಿ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಅಂತ ಚೆಕ್ ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸರು ಬಿಟ್ಟು ಹೋಗಿದ್ದರೇ, ಸೇರಿಸಲು ನೀವು https://voterportal.eci.gov.in/ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ವಿಳಾಸ ಪುರಾವೇ, ಪೋಟೋ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ಪ್ರಬುಧ್ದ ಮತದಾರರೇ ನೆನಪಿರಲಿ, ಕೇವಲ ಹೊಸದಾಗಿ ಹೆಸರು ಸೇರಿಸೋದಕ್ಕೆ ಒಂದೇ ಒಂದು ವಾರ ಮಾತ್ರವೇ ಕಾಲಾವಕಾಶವಿದೆ. ಸೋ ಬೇಗ ಬೇಗ ಅರ್ಜಿ ಸಲ್ಲಿಸಿ, ನಿಮ್ಮ ಹೆಸರನ್ನು ಲೋಕಸಭಾ ಚುನಾವಣೆಗೆ ಮುಂಚವೇ ಸೇರಿಸಿ, ನಿಮ್ಮ ಅಮೂಲ್ಯ ಮತವನ್ನು ಚಲಾಯಿಸಿ.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ಶೇ.60ರಷ್ಟು ‘ಕನ್ನಡ ಬೋರ್ಡ್’ ಹಾಕದ ಮಳಿಗೆಗಳಿಗೆ ಬೀಗ ಹಾಕುವಂತಿಲ್ಲ: ರಾಜ್ಯ ಸರ್ಕಾರಕ್ಕೆ ‘ಹೈಕೋರ್ಟ್’ ಸೂಚನೆ