ಬೆಂಗಳೂರು : ಬೆಂಗಳೂರಿನಲ್ಲಿ ಪತಿ ಕಳೆದುಕೊಂಡವರು ಹಾಗೂ ಪತಿಯನ್ನು ಬಿಟ್ಟು ದೂರವಾದವರೇ ಈ ಕಿರಾತಕನ ಟಾರ್ಗೆಟ್ ಆಗಿದ್ದಾರೆ. ಒಂದಲ್ಲ ಎರಡಲ್ಲ ಇವರು ಹೆಣ್ಣು ಮಕ್ಕಳ ಬಾಳಿನಲ್ಲಿ ಈ ಕಿರಾತಕ ಆಟ ಆಡಿದ್ದು ಬಾಳು ಕೊಡೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹಣ ಚಿನ್ನ ಪಡೆದು ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ.
ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಎಂಡಿ ರಾಮಾಂಜಿ (38) ಈ ಕೃತ್ಯ ಎಸಗಿದ್ದು, ಇದೀಗ ಆತನ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿದ್ದು, ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಅಪಾರ್ಟ್ಮೆಂಟ್ ಗಳಲ್ಲಿ ಸೆಕ್ಯೂರಿಟಿ, ಹೌಸ್ ಕೀಪಿಂಗ್ ಕೆಲಸವನ್ನು ಮಾಡಿಸುತ್ತಿದ್ದ. ಈತನ ಬಳಿ ಸುಮಾರು 60ಕ್ಕೂ ಹೆಚ್ಚು ಜನ ಕೆಲಸಕ್ಕೆ ಇದ್ದರು. ಕೆಲಸಕ್ಕೆ ಬರುವ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದ ಎಂದು ಗೊತ್ತಾಗಿದೆ.
ಅಪ್ಪ ಅಮ್ಮನ ಬಿಟ್ಟು ಬೆಂಗಳೂರಿಗೆ ಬರುವ ಹೆಣ್ಣು ಮಕ್ಕಳು ಇಲ್ಲಿ ಕೆಲಸ ಹುಡುಕಿಕೊಂಡು ಬರುತ್ತಾರೆ. ಅಲ್ಲದೆ ಗಂಡನನ್ನು ಕಳೆದುಕೊಂಡವರು ಅಥವಾ ಗಂಡನಿಂದ ಡಿವೋರ್ಸ್ ಪಡೆದ ಹೆಣ್ಣು ಮಕ್ಕಳು ಇಲ್ಲಿ ಕೆಲಸ ಮಾಡುತ್ತಾರೆ. ಅಂತಹ ಹೆಣ್ಣು ಮಕ್ಕಳ ತಲೆ ಕೆಡಿಸಿ ಬಾಳು ಕೊಡುವುದಾಗಿ ನಂಬಿಸಿ ಅವರ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಾನೆ. ಬಳಿಕ ಹಣ ಒಡವೆ ದೋಚಿ ವಂಚನೆ ಎಸಗುತ್ತಾನೆ ಎಂದು ಮಹಿಳೆ ಒಬ್ಬರು ಆರೋಪಸಿದ್ದಾರೆ.








