ಬೆಂಗಳೂರು : ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅದರಲ್ಲೂ ತೀವ್ರ ಚುನಾವಣಾ ರಂಗೇರಿದ್ದು, ಚನ್ನಪಟ್ಟಣ ಕ್ಷೇತ್ರ ಎಂದು ಹೇಳಲಾಗುತ್ತಿದೆ. ಈ ಒಂದು ಉಪಚುನಾವಣೆ ಕುರಿತಾಗಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಕಾಲೇಜಿನಲ್ಲಿ ಸಭೆ ನಡೆಯಿತು.
ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಅಂತ ಹೇಳಿದ್ದೇನೆ. ಬೆಂಗಳೂರಿನಲ್ಲಿ ಸಭೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಪಕ್ಷದಿಂದ ಯಾರೇ ಸ್ಪರ್ಧಿಸಲಿ ಅದನ್ನು ನೋಡೋಕೆ ಹೋಗಬೇಡಿ. ಜೆಡಿಎಸ್ ನವರು ಸೀಟು ಬಿಟ್ಟು ಕೊಡುತ್ತಿದ್ದಾರೆಂದು ಯಾರೋ ಹೇಳಿದರು. ಸಭೆಯಲ್ಲಿದ್ದಾಗ ಯಾರೋ ಫೋನ್ ಕರೆ ಮಾಡಿ ನನಗೆ ಹೇಳಿದರು.
ನಿನ್ನೆ ರಾತ್ರಿ ಎಲ್ಲಾ ಸಭೆಯ ಮೇಲೆ ಸಭೆ ಮಾಡಿದ್ದಾರೆ. ಅಷ್ಟು ವೀಕ್ ಆಗ್ತಾರೆ ಅಂತ ತಿಳಿದುಕೊಂಡಿರಲಿಲ್ಲ. ನೋಡೋಣ, ಫೈಟ್ ಮಾಡ್ತಾರೆ ಅಂತ ಅಂದುಕೊಂಡಿದ್ದೆ ಆದರೆ ಬಿಟ್ಟುಕೊಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಸೇವೆ ಮಾಡುವ ಸಲುವಾಗಿ ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಹೋಗ್ತಿದ್ದೆ. ಆದರೆ ಇಷ್ಟು ವೀಕ್ ಆಗ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಯುದ್ಧಕ್ಕೂ ಮುನ್ನ ಶಸ್ತ್ರತ್ಯಾಗಾನ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.