ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಭೇಟಿಯಾಗಿದ್ದರು.
BIGG NEWS: ತುಮಕೂರು ಘಟನೆ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ: ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ
ಆಶ್ರಮದ ಭಕ್ತನಾಗಿದ್ದ ಚಂದ್ರು ವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಕೈಗೆ ಒಂದು ಹಣ್ಣನ್ನು ನೀಡಿ ಟೈಂ ಆಗಿದೆ. ಹುಷಾರಾಗಿ ಹೋಗಿ ಎಂದಿದ್ದರು. ಚಂದ್ರು ಸಾವು ವಿನಯ್ ಗುರೂಜಿಗೂ ಕೂಡ ನೋವು ತಂದಿದೆ ಎಂದರು.
BIGG NEWS: ತುಮಕೂರು ಘಟನೆ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ: ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ
ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ ಎಂದರು.