ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಕೊಲೆ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು,ಸಿಸಿಟಿವಿಗಳ ಪರಿಶೀಲನೆ ವೇಳೆ ಚಂದ್ರಶೇಖರ್ ಓಡಾಟದ ದೃಶ್ಯಾವಳಿಗಳು ಸೆರೆಯಾಗಿವೆ. ಇದನ್ನು ಆಧರಿಸಿ ಕಿರಣ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾಣೆ ಆರಂಭಿಸಿದ್ದಾರೆ.
ಅಕ್ಟೋಬರ್ 30 ಚಂದ್ರಶೇಖರ್ ಚಿಕ್ಕಮಗಳೂರಿನ ಗೌರಿ ಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದಾರೆ. ಗೌರಿ ಗದ್ದೆಯಲ್ಲಿ ಪೂಜೆಗೆ ಹೋಗಿದ್ದ ಚಂದ್ರಶೇಖರ್, ಪೂಜೆ ಮುಗಿದ ನಂತರ ಭಕ್ತರಿಗೆ ಊಟ ಬಡಿಸಿದ್ದಾರೆ. ಈ ವೇಳೆ ಕಿರಣ್ ಎಂಬ ಯುವಕ ಚಂದ್ರಶೇಖರ್ ಜೊತೆಗಿರುವುದು ತಿಳಿದುಬಂದಿದೆ. ಕಿರಣ್ ಚಂದ್ರಶೇಖರ್ ಜೊತೆ ಹೋಗಿದ್ದು, ಕಿರಣ್ ಶಿವಮೊಗ್ಗದಲ್ಲೇ ಇಳಿದಿದ್ದಾನೆ. ನ್ಯಾಮತಿಯ ಬಳಿ ಸಿಕ್ಕಿರುವ ಸಿಸಿಟಿವಿಯಲ್ಲಿ ಚಂದ್ರಶೇಖರ್ ಮಾತ್ರ ಇದ್ದರು. ಈ ಹಿನ್ನೆಲೆ ಹೆಚ್ಚಿನ ತನಿಖೆಗಾಗಿ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಇನ್ನೂ, ಘಟನೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರು ನೀಡುವ ದೂರಿನಂತೆ ತನಿಖೆ ನಡೆಯುತ್ತದೆ, ಶಾಸಕ ರೇಣುಕಾಚಾರ್ಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ತನಿಖೆ ಬಗ್ಗೆ ಚಂದ್ರಶೇಖರ್ ತಂದೆ ಅಭಿಪ್ರಾಯ ಪಡೆಯುತ್ತೇವೆ , ಕುಟುಂಬಸ್ಥರು ನೀಡುವ ದೂರಿನಂತೆ ತನಿಖೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಸಾವಿನ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಾಸಕರ ಸಹೋದರನ ಪುತ್ರ ಸಾವಿನ ಬಗ್ಗೆ ಕೆಲವು ಅನುಮಾನಗಳು ಕೇಳಿ ಬರ್ತಿವೆ ಎನ್ನುವ ಬಗ್ಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ. ತನಿಖೆ ನಡೆಯದೆ ಏನೂ ಹೇಳೋಕೆ ಸಾಧ್ಯವಿಲ್ಲ. ರೇಣುಕಾಚಾರ್ಯ ನನ್ನಜೊತೆ ಸಂಪರ್ಕದಲ್ಲಿದ್ರು. ಅವರ ಜೊತೆ ನಾನು ಮಾತನಾಡ್ತಿದ್ದೆ ಎಂದರು. ಶಾಸಕ ರೇಣುಕಾಚಾರ್ಯ ಚಂದ್ರಶೇಖರ್ ಕಿಡ್ನ್ಯಾಪ್ ಶಂಕೆಯನ್ನು ವ್ಯಕ್ತ ಪಡಿಸಿದ್ದರು. ಅದು ಖಚಿತ ಆಗಿಲ್ಲ, ತನಿಖೆಯಿಂದ ಗೊತ್ತಾಗಬೇಕು. ದಿನಕ್ಕೆ ಎರಡು ಮೂರು ಬಾರಿ ಫೋನ್ ಮಾಡ್ತಾ ಇದ್ರು. ಅಧಿಕಾರಿಗಳಿಗೆ ನಾನು ಸೂಚನೆ ಕೊಟ್ಟಿದ್ದೆ ಎಂದು ಹೇಳಿದರು.