ಚಂಡೀಗಢ: ಮಹಿಳೆಯೊಬ್ಬಳನ್ನು ಅಪಹರಿಸಿರುವಂತ ಇಬ್ಬರು ಕೀಚಕರು, ಸತತ ನಾಲ್ಕು ದಿನ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ, ಚಂಡೀಗಢದಲ್ಲಿ ನಡೆದಿರೋದು ವರದಿಯಾಗಿದೆ.
ಮಹಿಳೆ ಅಪಹರಿಸಿದಂತ ಇಬ್ಬರು ಆರೋಪಿಗಳು, ನಿದ್ರೆ ಬರೋ ಔಷಧಿ ನೀಡಿ, ತಮ್ಮ ಬಾಡಿಗೆ ಕೋಣೆಯಲ್ಲಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರವೆಸಗಿರೋದಾಗಿ ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಶಂಕಿತನನ್ನು ಪರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಪರ್ವಿಂದರ್ ಸಿಂಗ್ ಹಾಗೂ ಮತ್ತೊಬ್ಬ ಆರೋಪಿಯಿಂದ ಹೀಗೆ ಮಹಿಳೆಯನ್ನು ಕೂಡಿಹಾಕಿ, ಮತ್ತು ಭರಿಸೋ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರೋದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂತ್ರಸ್ತೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಕೆಲಸ ಹುಡುಕುವ ಸಲುವಾಗಿ ಸುಮಾರು 20 ದಿನಗಳ ಮೊದಲು ಮೊಹಾಲಿಯಲ್ಲಿರುವ ಸ್ನೇಹಿತನೊಂದಿಗೆ ತೆರಳಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ.
ಫಿಲಿಪ್ಪೀನ್ಸ್ ಪ್ರವಾಹಕ್ಕೆ 13 ಬಲಿ, 23 ಮಂದಿ ನಾಪತ್ತೆ | Philippines Floods