ಚಂಡೀಗಢ: ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳು ಭುಗಿಲೆದ್ದಿವೆ. ಇದಕ್ಕೆ ವಿದ್ಯಾಲಯದ ಅಧಿಕಾರಿಗಳು ಸ್ಟಷ್ಟನೆ ನೀಡಿದ್ದಾರೆ. ಯುವತಿಯೋರ್ವಳು ಚಿತ್ರೀಕರಿಸಿದ ವೈಯಕ್ತಿಕ ವಿಡಿಯೋ ಹೊರತುಪಡಿಸಿ ವಿದ್ಯಾರ್ಥಿನಿಯರ ಯಾವುದೇ ವಿಡಿಯೋವನ್ನು ಶೇರ್ ಮಾಡಿಲ್ಲ. ಅದನ್ನು ಆಕೆ ತನ್ನ ಗೆಳೆಯನೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಚಂಡೀಗಢ ವಿಶ್ವವಿದ್ಯಾನಿಲಯದ ಪ್ರೊ-ಚಾನ್ಸಲರ್ ಆರ್ಎಸ್ ಬಾವಾ ಅವರು ಅಧಿಕೃತ ಹೇಳಿಕೆ ನೀಡಿದ್ದು, ಏಳು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳಿವೆ. ಆದರೆ ಯಾವುದೇ ಹುಡುಗಿ ಅಂತಹ ಯಾವುದೇ ಕ್ರಮಕ್ಕೆ ಪ್ರಯತ್ನಿಸಲಿಲ್ಲ. ಘಟನೆಯಲ್ಲಿ ಯಾವುದೇ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿವಿಧ ವಿದ್ಯಾರ್ಥಿನಿಯರ 60 ಆಕ್ಷೇಪಾರ್ಹ ಎಂಎಂಎಸ್ಗಳು ಪತ್ತೆಯಾಗಿವೆ ಎಂಬ ಮತ್ತೊಂದು ವದಂತಿ ಇದೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ಇತರ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ ಎಂಬ ಎಲ್ಲಾ ವದಂತಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಯುವತಿಯೋರ್ವಳು ಚಿತ್ರೀಕರಿಸಿದ ವೈಯಕ್ತಿಕ ವಿಡಿಯೋವನ್ನು ಹೊರತುಪಡಿಸಿ, ಆಕ್ಷೇಪಾರ್ಹವಾದ ಯಾವುದೇ ವಿದ್ಯಾರ್ಥಿಯ ವಿಡಿಯೋಗಳು ಕಂಡುಬಂದಿಲ್ಲ. ಅದನ್ನು ಸ್ವತಃ ತನ್ನ ಗೆಳೆಯ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಸ್ವೀಕರಿಸಿದ ಮನವಿಯ ಮೇರೆಗೆ ಚಂಡೀಗಢ ವಿಶ್ವವಿದ್ಯಾನಿಲಯವು ಸ್ವಯಂಪ್ರೇರಿತರಾಗಿ ಪಂಜಾಬ್ ಪೊಲೀಸ್ ಇಲಾಖೆಗೆ ಹೆಚ್ಚಿನ ತನಿಖೆಯನ್ನು ನೀಡಿದ್ದು, ಒಬ್ಬ ಬಾಲಕಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಎಫ್ಐಆರ್ ದಾಖಲಿಸಿದೆ ಎಂದು ಬಾವಾ ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಎಲ್ಲಾ ಮೊಬೈಲ್ ಫೋನ್ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಚಂಡೀಗಢ ವಿಶ್ವವಿದ್ಯಾನಿಲಯವು ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹೇಳಿಕೆ ತಿಳಿಸಿದೆ.
BIGG NEWS : ಗುಡ್ ಬೈ ಇಂಡಿಯಾ ; ಕೇಂದ್ರದ ಹೊಡೆತಕ್ಕೆ ಭಾರತ ತೊರೆಯುತ್ತಿರುವ ‘ಚೀನೀ ಸ್ಮಾರ್ಟ್ ಫೋನ್ ಕಂಪನಿ’ಗಳು
ಪಂಜಾಬ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ
ಚಂಡೀಗಢ ವಿಶ್ವವಿದ್ಯಾನಿಲಯದ ಘಟನೆಯ ಬಗ್ಗೆ ಕೇಳಿ ಬೇಸರವಾಯಿತು. ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾನು ಆದೇಶಿಸಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನಾನು ನಿರಂತರವಾಗಿ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ವದಂತಿಗಳಿಂದ ದೂರವಿರುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮನವಿ ಮಾಡಿದ್ದಾರೆ.
ಶನಿವಾರ ರಾತ್ರಿ ಮೊಹಾಲಿಯಲ್ಲಿ ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಹಿಳಾ ವಿದ್ಯಾರ್ಥಿಗಳ ‘ಸೋರಿಕೆಯಾದ ಆಕ್ಷೇಪಾರ್ಹ ವಿಡಿಯೋಗಳು ವೈರಲ್ ಆದ ನಂತರ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.
ಇದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡಿದ ವಿಷಯವಾಗಿದೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾವು ವರದಿಯಾಗಿಲ್ಲ. ವೈದ್ಯಕೀಯ ದಾಖಲೆಗಳ ಪ್ರಕಾರ, ಯಾವುದೇ ಆತ್ಮಹತ್ಯೆ ಯತ್ನ ಅಥವಾ ಸಾವು ಸಂಭವಿಸಿಲ್ಲ. ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾದ ಒಬ್ಬ ವಿದ್ಯಾರ್ಥಿನಿ ಆತಂಕದಿಂದ ಬಳಲುತ್ತಿದ್ದಳು ಮತ್ತು ನಮ್ಮ ತಂಡವು ಅವಳನ್ನು ಸಂಪರ್ಕಿಸುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ), ಮೊಹಾಲಿ ವಿವೇಕ್ ಸೋನಿ ಹೇಳಿದ್ದಾರೆ.
ಭ್ರಷ್ಟಾಚಾರ ಆರೋಪ ಕೇಸ್ನಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಎಸ್ ಯಡಿಯೂರಪ್ಪ