ಚಂಡೀಗರ್ : ಮಕ್ಕಳನ್ನು ಆಡಲು ಬಿಡುವ ಮುನ್ನ ಪೋಷಕರು ಜಾಗರೂಕತೆ ವಹಿಸದಿದ್ದರೆ ಏನೆಲ್ಲಾ ದುರಂತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಇಲ್ಲಿನ ಭೈರಿ ಭೈರೋನ್ ಗ್ರಾಮದಲ್ಲಿ 14 ತಿಂಗಳ ಹಸುಗೂಸು ನೀರು ತುಂಬಿದ ಬಕೆಟ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಮೃತ ಮಗುವಿನ ತಂದೆ ಸೌರ್ಬಾ ಮೆಹಮ್ಗೆ ಕೆಲಸಕ್ಕಾಗಿ ಹೋಗಿದ್ದಾಗ ಮತ್ತು ಆಕೆಯ ತಾಯಿ ಕೂಡ ಮನೆಯಲ್ಲಿರದಿದ್ದಾಗ ಈ ಘಟನೆ ನಡೆದಿದೆ.
ಮಗು ಆಟವಾಡುತ್ತಾ ಬಾತ್ ರೂಮ್ ಗೆ ಹೋಗಿದ್ದು, ಅಲ್ಲಿ ನೀರು ತುಂಬಿದ ಬಕೆಟ್ ಕಂಡು ಆಟವಾಡಲು ಹೋಗಿದೆ. ಈ ವೇಳೆ ಬಕೆಟ್ ನಲ್ಲಿ ಬಿದ್ದು ಮಗು ಸಾವನ್ನಪ್ಪಿದೆ ಎಂದು ಮೆಹಮ್ ಪೊಲೀಸ್ ಠಾಣೆಯ ಎಎಸ್ಐ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.