ಚಾಮರಾಜನಗರ : ಚಾಮರಾಜನಗರದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ಒಬ್ಬ ಶೌಚಾಲಯಕ್ಕೆ ತೆರಳಲು ಅನುಮತಿ ಕೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಹಿಗ್ಗಾಮುಗ್ಗ ಥಳಿಸಿ, ವಿದ್ಯಾರ್ಥಿ ಮೂರ್ಛೆ ಬರುವ ಹಾಗೆ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಲ್ಲಿ ನಡೆದಿದೆ.
11 ವರ್ಷದ ಬಾಲಕನ ಮೇಲೆ ಮಾರಣಾಂತಿಕವಾಗಿ ಶಿಕ್ಷಕಿ ಭಾನುಮತಿ ಹಲ್ಲೆ ನಡೆಸಿದ್ದಾಳೆ. ಯಳಂದೂರಿನ ಎಸ್ಡಿವಿಎಸ್ ಶಾಲೆಯಲ್ಲಿ ಇವತ್ತು ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಎಳಂದೂರಿನ SDVS ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಗುರುಪ್ರಸಾದ್ಗೆ ಶಿಕ್ಷಕಿ ಭಾನುಮತಿ ಥಳಿಸಿದ್ದಾರೆ. ಶಿಕ್ಷಕಿ ಹೊಡೆತಕ್ಕೆ ಗುರುಪ್ರಸಾದ್ ಮೂರ್ಛೆ ಹೋಗಿದ್ದಾನೆ.
ವಿದ್ಯಾರ್ಥಿ ಗುರುಪ್ರಸಾದ್ ಗೆ ಗಂಭೀರವಾದ ಗಾಯಗಳಾಗಿದ್ದು, ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ವಿದ್ಯಾರ್ಥಿ ಗುರುಪ್ರಸಾದ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಶಿಕ್ಷಕಿ ಭಾನುಮತಿ ವಿರುದ್ಧ ವಿದ್ಯಾರ್ಥಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ, ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.