ಚಾಮರಾಜನಗರ : ಚುನಾವಣೆಯಲ್ಲಿ ವಿರುದ್ಧವಾಗಿ ಮತ ಹಾಕಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಕುಟುಂಬವೊಂದು ಮುಂದಾಗಿದ್ದ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಉಪಾರಶೆಟ್ಟಿ ಸಮುದಾಯದ ರವಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ವರ್ಷದ ಹಿಂದೆ ಕೇವಲ 5000 ಚೀಟಿ ಹಣ ಕೊಡುವಂತೆ ರವಿ ಕೇಳಿದ್ದಾನೆ. ರವಿ ಬದಲು ಬೇರೆ ಅವರಿಗೆ ಊರಿನ ಜಮಾನರು ಚೀಟಿ ಹಣ ನೀಡಿದ್ದರು. ಇದನ್ನು ಪ್ರಶ್ನೆಸಿ ಗ್ರಾಮದ ಯಜಮಾನರ ಜೊತೆ ರವಿ ಜಗಳವಾಡಿದ್ದ. ಘಟನೆ ನಡೆದ ಒಂದು ವಾರದಲ್ಲಿ ಸಮುದಾಯದ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಯಜಮಾನರ ವಿರೋಧಿ ಬಣ್ಣಕ್ಕೆ ರವಿ ಮತ ಹಾಕಿದ್ದಾನೆ. ಯಜಮಾನರ ವಿರೋಧಿ ಬಣಕ್ಕೆ ಮತ ಹಾಕಿದ್ದಕ್ಕೆ ರವಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಯಾರು ರವಿ ಕುಟುಂಬಸ್ಥರನ್ನು ಮಾತನಾಡಿಸಿದಂತೆ ಕಟ್ಟಾಜ್ಞೆ ಹೊರಡಿಸಲಾಗಿತ್ತು. ಯಾರಾದ್ರೂ ಮಾತನಾಡಿದಿದ್ದರೆ 10,000 ದಂಡ ವಿಧಿಸುವ ಎಚ್ಚರಿಕೆ ಸಹ ನೀಡಲಾಗಿತ್ತು . ಈ ವೇಳೆ ತಪ್ಪಾಯ್ತು ಕ್ಷಮಿಸಿ ಎಂದು ಬೇಡಿಕೊಂಡರು ಊರಿನ ಯಜಮಾನರು ಇದಕ್ಕೆ ಒಪ್ಪಲಿಲ್ಲ. ಇನ್ನು ಪಕ್ಕದಲ್ಲೇ ಇರೋ ತಂದೆ ಮನೆಗೆ ಹೋಗಲಾಗದೆ ರವಿ ಪತ್ನಿ ಸವಿತಾ ಕಣ್ಣೀರು ಹಾಕುತ್ತಿದ್ದಾರೆ 20,000 ದಿಂದ 50,000 ತಪ್ಪೊಪ್ಪಿಗೆ ದಂಡ ಕಟ್ಟಬೇಕು ಎಂದು ಸೂಚನೆ ನೀಡಲಾಗಿದೆ. ದಂಡ ಕಟ್ಟಲಾಗದೆ ಬೆಂಡರವಾಡಿ ಗ್ರಾಮದ ರವಿ ಕುಟುಂಬ ಇದೀಗ ಕಂಗಾಲಾಗಿದೆ.