ಚಾಮರಾಜನಗರ : ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಟ ನಿರ್ದೇಶಕ ಉಪೇಂದ್ರ ಹಾಗೂ ನಟಿ ಪ್ರೇಮ ಅವರು ನಟಿಸಿರುವ ಉಪೇಂದ್ರ ಚಲನಚಿತ್ರದ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು ಸಖತ್ ಟ್ರೆಂಡಿಂಗ್ ನಲ್ಲಿದೆ. ಆದರೆ ಈ ಒಂದು ರೀಲ್ಸ್ ಗೆ ಮನನೊಂದು ವ್ಯಕ್ತಿ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು.
ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ ಮೇಲೂ ದೂರು ಕೊಟ್ಟಿದ್ದಾರೆ. ಮೂವರು ನಮ್ಮ ಅಣ್ಣನ ಸಾವಿಗೆ ಕಾರಣರಾಗಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದೆಯೂ ಕೂಡ ರೂಪಾ ಹಾಗೂ ಕುಮಾರ್ ನಡುವೆ ಕಲಹ ನಡೆದಿತ್ತು. ಆ ವೇಳೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಎಲ್ಲಾ ಸೇರಿ ಬಿಡಿಸಿದ್ದೇವು. ಈಗ ಮತ್ತೆ ರೀಲ್ಸ್ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ಕೊಟ್ಟಿದ್ದಾರೆ.
ಕೇಂದ್ರದಿಂದ ಅನುದಾನ ತಾರತಮ್ಯ: ಪರಿಷತ್‌ನಲ್ಲಿ ಕೋಲಾಹಲ, ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ
ಕೊಪ್ಪಳದಲ್ಲಿ ಅಸ್ಪೃಶ್ಯತೆ : ಉಪಹಾರ ನಿರಾಕರಿಸಿದ್ದ ಹೋಟೆಲ್ನಲ್ಲಿ ದಲಿತರಿಗೆ ಉಪಹಾರ ಸೇವನೆ,ಶಾಂತಿ ಸಭೆ ಯಶಸ್ವಿ