ಚಾಮರಾಜನಗರ : ನೆರೆಹೊರೆ ಮನೆಯವರ ಮಾನಸಿಕ ಕಿರುಕುಳದಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಚನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಹೌದು ಮೊಬೈಲ್ ಗೆ ಬರುತ್ತಿದ್ದ ಮೆಸೇಜ್ ವಿಷಯದಲ್ಲಿ ಪಕ್ಕದ ಮನೆಯವರ ಮಾನಸಿಕ ಕಿರುಕುಳದಿಂದ ಮನನೊಂದು ಮನೆ ಬಾಗಿಲಿಗೆ ನೊರೆ ಹೊರೆಯವರ ಹೆಸರು ಬರೆದು ಕವನ (24) ಎನ್ನುವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಾಮರಾಜನಗರ ಜಿಲ್ಲೆಯ ಚೆನ್ನಮಲ್ಲಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಿಲಿಗೆ ಅಂಟಿಸಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಿರುಕುಳ ಮತ್ತು ಅವಮಾನಕ್ಕೆ ನೊಂದು ಕವನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನನ್ನ ಮಗಳ ಸಾವಿಗೆ ವೃಷಬೇಂದ್ರೆ ಇವರ ಪತ್ನಿ ಕವಿತಾ ಮತ್ತು ಮಕ್ಕಳಾದ ಕಾವೇರಿ ಮತ್ತು ಕೀರ್ತನ ಕಾರಣರಾಗಿದ್ದಾರೆ ನನ್ನ ಮಗಳು ಡೆತ್ ನೋಟ್ ಮತ್ತು ಮನೆಯ ಬಾಗಿಲನ ಮೇಲು ತನ್ನ ಸಾವಿಗೆ ಈ ನಾಲ್ವರು ಕಾರಣ ಎಂದು ಬರೆದಿದ್ದಾಳೆ ಎಂದು ಮೃತಳ ತಾಯಿ ಗಾಯತ್ರಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.