ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳಿಗೆ ವಿಷ ಹಾಕಿ ಐದು ಹುಲಿಗಳನ್ನು ಕೊಲೆಗೈದಿದ್ದ ಪ್ರಕರಣ ನಡೆದಿತ್ತು. ಇದೀಗ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದೆ.
ಹೌದು ಬಿ ಆರ್ ಹೆಲ್ತ್ ನಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೈ ಅಲರ್ಟ್ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಯಾರು ಕೂಡ ಒಬ್ಬರೇ ಓಡಾಡದಂತೆ ಅರಣ್ಯ ಸಿಬ್ಬಂದಿಗಳು ಮೈಕ್ ಮೂಲಕ ಜನರಲ್ಲಿ ಮನವಿ ಮಾಡಿದರು.