ಚಾಮರಾಜನಗರ : ಸ್ನೇಹಿತರ ಜೊತೆಗೆ ಕಾವೇರಿ ನದಿಗೆ ಈಜಲು ತೆರಳಿದ ಯುವಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ನಡೆದಿದೆ.
ಮೃತ ಯುವಕನನ್ನು ಬೆಂಗಳೂರಿನ ಜೆಪಿ ನಗರ ನಿವಾಸಿ ಸಾಹಿಲ್ ಪಾಷಾ (23) ಎಂದು ತಿಳಿದುಬಂದಿದೆ. ರಂಜಾನ್ ಮುಗಿದ ಹಿನ್ನೆಲೆಯಲ್ಲಿ ಸ್ಸಾಹಿಲ್ ಹಾಗೂ ಸ್ನೇಹಿತರ ಗುಂಪು ಶಿವನಸಮುದ್ರ ಬಳಿಯ ದರ್ಗಾಕ್ಕೆ ಹೋಗಿದ್ದರು. ಪ್ರಾಥನೆ ಸಲ್ಲಿಸಿ ಬಳಿಕ ಸೇತುವೆ ಬಳಿ ಕಲ್ಲುಬಂಡೆ ಬಳಿ ಹೋಗಿದ್ದವರು ನದಿಯಲ್ಲಿ ಈಜಲು ಇಳಿದಿದ್ದಾರೆ.
9 ಜನ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ.ಈ ವೇಳೆ ನೀರಿನಲ್ಲಿ ಮುಳುಗಿ ಸಾಹಿಲ್ ಸಾವನ್ನಪ್ಪಿದ್ದಾನೆ. ಈ ಒಂದು ಘಟನೆ ಕುರಿತಂತೆ ಕೊಳ್ಳೆಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಕಲಿಸಿಕೊಂಡ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.