ಚಾಮರಾಜನಗರ : ಮಲೆ ಮಾದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಸಾಗಾಟ ನಿಲ್ಲುತ್ತಿಲ್ಲ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮುಂದುವರೆದಿದೆ. ಸಿಎಂ ಸಿದ್ದರಾಮಯ್ಯ ಮದ್ಯ ಮುಕ್ತ ಮಾಲೆ ಮಾದೇಶ್ವರ ಬೆಟ್ಟವನ್ನಾಗಿಸಲು ಪಣತೊಟ್ಟಿದ್ದಾರೆ.
ಆದರೆ ಇದೀಗ ಮಾದಪ್ಪನ ಬೆಟ್ಟದಲ್ಲಿ ಮದ್ಯ ಸಾಗಟ ಎಗ್ಗಿಲ್ಲದೆ ನಡೆಯುತ್ತಿದೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಲೂ ಇರುವ ಹುಲಿಗೂಡು, ತಂಬಡಗಿರಿ ಗ್ರಾಮದ ಬಳಿ ಅಕ್ರಮ ಮದ್ಯ ಸಾಗಾಟಕ್ಕೆ ಯತ್ನಿಸಲಾಗಿದೆ. ಈ ವೇಳೆ ವಡ್ಡರದೊಡ್ಡಿ ಗ್ರಾಮದ ನಿವಾಸಿ ಎ.ಜೇಮ್ಸ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.