ಚಾಮರಾಜನಗರ : ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಆನಂದ್ ಹಾಗೂ ಶುಭಮಾನಸ ದಂಪತಿಯ ಮಗು ಪ್ರಖ್ಯಾತ ಎನ್ನುವ 6 ತಿಂಗಳ ಗಂಡು ಮಗು ಸಾವನಪ್ಪಿದ್ದಾನೆ. ಕಿವಿ ಚುಚ್ಚಿಸಲು PHC ಗೆ ಪೋಷಕರು ಮಗುವನ್ನು ಕರೆದುಕೊಂಡು ಹೋಗಿದ್ದರು. ಬೊಮ್ಮಲಾಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು.
ಈ ವೇಳೆ ಮಗುವಿಗೆ ಅನಸ್ತೇಷಿಯ ನೀಡಿದ್ದರಿಂದ ಅನೆಸ್ತೇಶಿಯ ನೀಡಿದ ಬಳಿಕ ಪ್ರಖ್ಯಾತ್ ಪ್ರಜ್ಞೆ ತಪ್ಪಿದ್ದಾನೆ. ಮಗುವಿಗೆ ಅನಾಸ್ತೇಶಿಯ ಕೊಟ್ಟ ಬಳಿಕ ಪಿಟ್ಸ್ ಸಹ ಬಂದಿತ್ತು.ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪ್ರಖ್ಯಾತ ಸಾವನಪ್ಪಿದ್ದಾನೆ. ಪಿಎಚ್‌ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಧಿಕಾರಿ ಡಾ. ಆಲಂಪಾಷಾ ಹೇಳಿಕೆ ನೀಡಿದ್ದಾರೆ.