ಬೆಂಗಳೂರು: ರಾಜ್ಯದ ಪೊಲೀಸರ ನಿದ್ದೆಗೆಡಿಸಿದ್ದ ಹಾಗೂ 15 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ತಮಿಳುನಾಡು ಮೂಲದ ಸಂತೋಷ್ ಎಂಬ ಸರಗಳ್ಳನನ್ನು ಇದೀಗ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ, ಈತನಿಗೆ ಸಹಕರಿಸುತ್ತಿದ್ದ ರವಿ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ ಸುಮಾರು ಒಂದು ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬೈಕ್ಗೆ ನಕಲಿ ನಂಬರ್ ಪ್ಲೇಟ್ ಬಳಸಿ ಈ ಕೃತ್ಯವೆಸಗುತ್ತಿದ್ದ ಆರೋಪಿ ಆರ್ಟಿಒ ವೆಬ್ಸೈಟ್ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದನಂತೆ. ಈತ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೆ ಬೈಕ್ನಲ್ಲೇ ಸುತ್ತಾಡಿ, ಕೊನೆಗೂ ಸರಗಳ್ಳತನ ಮಾಡಿಯೇ ಮನೆಗೆ ವಾಪಸ್ ಆಗ್ತಿದ್ದ.
ಹೀಗೆ ಮಾಡ್ತಿದ್ದ ಆರೋಪಿ ಪೊಲೀಸರಿಗೆ ತಲೆನೋವಾಗಿ ಬಿಟ್ಟಿದ್ದ. ಇದರಿಂದ ಎಚ್ಚೆತ್ತುಕೊಂಡ ಪುಟ್ಟೇನಹಳ್ಳಿ ಪೊಲೀಸರು ಸಂತೋಷ್ಗಾಗಿ ಹಿಂದೆಬಿದ್ದಿದ್ದರು. ಇವನನ್ನು ಹಿಡಿಯಲು ಸಿಸಿ ಕ್ಯಾಮೆರಾಗಳ ಮೊರೆ ಹೋದ ಪೊಲೀಸರು ಸುಮಾರು 300 ಕಿಮೀ ವರೆಗಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಕೊನೆಗೂ ಆರೋಪಿಯ ಜಾಡು ಪತ್ತೆಹಚ್ಚಿದ ಪೊಲೀಸರು ಕಳೆದ 4 ವರ್ಷಗಳಿಂದ ಯಾರ ಕೈಗೂ ಸಿಗದ ಸಂತೋಷ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
BIGG NEWS : ರಾಜ್ಯದಲ್ಲಿ ಆಗಸ್ಟ್ 29 ರಿಂದ `ಗ್ರಾಮೀಣ ಕ್ರೀಡಾಕೂಟ’ : ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ