ಬೆಂಗಳೂರು: ನಿನ್ನೆ ಸದನದಲ್ಲಿ ಭಾಷಾ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆದಿದ್ದು, ಹಿಂದಿ ಭಾಷೆ ಅಭಿವೃದ್ಧಿಗೆ ರೂ.1600 ಕೋಟಿ, ಸಂಸ್ಕೃತಕ್ಕೆ ರೂ.400ಕೋಟಿ ಇಟ್ಟಿರುವ ಕೇಂದ್ರ ಸರ್ಕಾರ, ಶಾಸ್ತ್ರೀಯ ಭಾಷೆಯಾಗಿರುವ ಕನ್ನಡಕ್ಕೆ ಕೇವಲ ರೂ.3 ಕೋಟಿ ನೀಡಿ ತಾರತಮ್ಯ ಎಸಗುತ್ತಿದೆ ಎಂದು ಮೇಲ್ಮನೆಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಗಮನ ಸೆಳೆದರು.
ಹುಬ್ಬಳ್ಳಿಯಲ್ಲಿ ಸೃಷ್ಟಿಯಾಗದ ಉದ್ಯೋಗ : ‘ಇನ್ಫೋಸಿಸ್’ ಜೊತೆ ಸಭೆ : ಸಚಿವ ಎಂಬಿ ಪಾಟೀಲ್
ಹಿಂದಿ ಸಾಹಿತಿಗಳಿಗೆ 5 ಜ್ಞಾನಪೀಠ ಬಂದಿದ್ದರೆ, ಕನ್ನಡಕ್ಕೆ 8 ಜ್ಞಾನಪೀಠ ಬಂದಿವೆ. ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಣೆ ಮಾಡಿ, ಅನುದಾನವನ್ನೇ ಕೊಡದೆ ಇದ್ದರೆ ಹೇಗೆ? ತೆರಿಗೆಯಲ್ಲಿಯೂ ತಾರತಮ್ಯ ಮಾಡಿ ಕನ್ನಡ ಭಾಷೆ ವಿಷಯದಲ್ಲಿಯೂ ಹೀಗೆ ನಡೆದುಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.
BREAKING : ವಕೀಲರ ಪ್ರತಿಭಟನೆಗೆ ಮಣಿದ ಸರ್ಕಾರ : ಐಜೂರು ಠಾಣೆ ಪಿಎಸ್ಐ ತನ್ವೀರ್ ಹುಸೇನ್ ಸಸ್ಪೆಂಡ್
ಪ್ರಧಾನಿ ಬೈಯುವುದನ್ನು ನಿಲ್ಲಿಸಿ: ಕೇಂದ್ರದಿಂದ ಅನುದಾನ ಬೇಕು ಅಂತೀರಿ. ಮೊದಲು ಪ್ರಧಾನಿಯನ್ನು ಏಕವಚನದಲ್ಲಿ ಬೈಯುವುದನ್ನು ನಿಲ್ಲಿಸಿ. ಆ ಮೇಲೆ ಅನುದಾನ ಕೇಳಿ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆಡಳಿತಪ ಪಕ್ಷದವರಿಗೆ ಟಾಂಗ್ ನೀಡಿದರು. ಆಡು ಭಾಷೆಯಲ್ಲಿ ಮಾತನಾಡುವುದನ್ನು ನೀವು ಹೀಗೆ ಹೇಳಿದರೆ ಹೇಗೆ ಎಂದು ಬಿ.ಕೆ. ಹರಿಪ್ರಸಾದ್ ಪ್ರತ್ಯುತ್ತರ ನೀಡಿದಾಗ ಚರ್ಚೆಗೆ ತೆರೆ ಬಿತ್ತು.
Breaking: ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಾರ್ಚ್ 1 ರವರೆಗೆ ಬ್ರೇಕ್!