ಬೆಂಗಳೂರು: ದೇಶದಲ್ಲಿ ಅಕ್ಕಿ ಬೆಲೆ ವಿಪರೀತವಾಗಿ ಹೆಚ್ಚಿದೆ. ರಾಜ್ಯದಲ್ಲಿಯೂ ಮಳೆ ಕೊರತೆಯಿಂದಾಗಿ ಭತ್ತದ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯೂ ಜಾಸ್ತಿಯಾಗಿದೆ. ದೇಶದಲ್ಲಿ ಪ್ರಸ್ತುತ ಕೆಜಿ ಅಕ್ಕಿಗೆ ಸರಾಸರಿ 43 ರೂ. ಇದೆ. ಕೆಲ ಬ್ರಾಂಡ್‌ನ ಅಕ್ಕಿಯ ದರ 55-60 ರೂ. ಇದೆ. ಕೆಲವರು ಕೃತಕ ಅಭಾವ ಸೃಷ್ಟಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಳವಾಗುವ ಆತಂಕ ತಂದೊಡ್ಡಿದೆ. ಹೀಗಾಗಿ, ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಅಕ್ಕಿ ಮಾರಾಟ ಮುಂದಾಗಿರುವ ಮೂಲಕ ಅಕ್ಕಿ ಬೆಲೆ ನಿಯಂತ್ರಣಕ್ಕೆ ಹೊಸ ಪ್ರಯತ್ನ ಮಾಡುತ್ತಿದೆ.
ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್
ಭತ್ತ, ಅಕ್ಕಿ, ಬಾಸ್ಮತಿ ಅಕ್ಕಿ ಸಂಗ್ರಹ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ದೇಶದ ಎಲ್ಲ ರಾಜ್ಯಗಳಲ್ಲಿರುವ ಸಗಟು, ವ್ಯಾಪಾರಿಗಳು, ಚಿಲ್ಲರೆ, ದೊಡ್ಡ ವರ್ತಕರು, ಸಂಸ್ಕರಣೆದಾರರು ಮತ್ತು ಗಿರಾಣಿ ಮಾಲೀಕರಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ನೀಡಿದೆ.
ಹುಬ್ಬಳ್ಳಿಯಲ್ಲಿ ಸೃಷ್ಟಿಯಾಗದ ಉದ್ಯೋಗ : ‘ಇನ್ಫೋಸಿಸ್’ ಜೊತೆ ಸಭೆ : ಸಚಿವ ಎಂಬಿ ಪಾಟೀಲ್
https://evegoils.nic.in/rice/login.html ಪೋರ್ಟಲ್‌ನಲ್ಲಿ ಆದೇಶ ಹೊರಡಿಸಿದ 7 ದಿನದೊಳಗೆ ಅಕ್ಕಿ ಮತ್ತು ಭತ್ತ ದಾಸ್ತಾನು ಮಾಡಿಕೊಂಡಿರುವುದನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಕೇಂದ್ರ ತಾಕೀತು ಮಾಡಿದೆ. ಅಲ್ಲದೆ, ಈ ಆದೇಶ ಪತ್ರಿಯನ್ನು ರಾಜ್ಯದ ಎಲ್ಲ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶದ ಪ್ರತಿಯನ್ನು ಕಳುಹಿಸಿದೆ.
BREAKING : ವಕೀಲರ ಪ್ರತಿಭಟನೆಗೆ ಮಣಿದ ಸರ್ಕಾರ : ಐಜೂರು ಠಾಣೆ ಪಿಎಸ್ಐ ತನ್ವೀರ್ ಹುಸೇನ್ ಸಸ್ಪೆಂಡ್
ಕೇಂದ್ರ ಸರ್ಕಾರವು, ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಹಾಗೂ ಕೇಂದ್ರೀಯ ಭಂಡಾರ್ ಔಟ್‌ಲೆಟ್‌ಗಳ ಮೂಲಕ ‘ಭಾರತ್ ಅಕ್ಕಿ’ ಯೋಜನೆಯಡಿ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡುತ್ತಿದೆ. ಭಾರತ್ ಅಕ್ಕಿ ಗುಣಮಟ್ಟದಿಂದ ಕೂಡಿದ್ದು, ದೇಶಾದ್ಯಂತ ಇದಕ್ಕೆ ಬೇಡಿಕೆ ಬರಲಾರಂಭಿಸಿದೆ. ಆದರೆ, ಅಕ್ಕಿ ದಾಸ್ತಾನು ಕಡಿಮೆ ಇದೆ. ಹೀಗಾಗಿ, ಗಿರಣಿ, ಸಗಟು, ಚಿಲ್ಲರೆ ಮತ್ತು ದೊಡ್ಡ ವ್ಯಾಪಾರಿಗಳು ಅಕ್ಕಿ ಸಂಗ್ರಹ ಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ ಎನ್ನಲಾಗಿದೆ.