ಹೊಸದಿಲ್ಲಿ: ಪಾನ್ ಮಸಾಲ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವವರಿಗೆ ಕೇಂದ್ರ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ತಂಬಾಕು ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಮಷಿನ್ ಗಳನ್ನು ಜಿಎಸ್‌ಟಿ ಪ್ರಾಧಿಕಾರಗಳ ಬಳಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇಲ್ಲದಿದ್ದರೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂಬ ನಿಯಮವನ್ನು ಜಾರಿಗೆ ತಂದಿದೆ.
ತಂಬಾಕು ಉತ್ಪನ್ನಗಳಲ್ಲಿ ಆದಾಯ ಸೋರಿಕೆ ತಡೆಯುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ಮಾಹಿತಿ ನೀಡಿದ್ದಾರೆ.
ಪಾನ್ ಮಸಾಲಾ ಗುಟ್ಕಾ ತಂಬಾಕು ಸೇರಿದಂತೆ ಇತರೆ ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಮಷಿನ್ ಗಳನ್ನು ಜಿಎಸ್‌ಟಿ ಪ್ರಾಧಿಕಾರಗಳ ಬಳಿ ಕಡ್ಡಾಯವಾಗಿ ನೋಂದಣಿ ಮಾಡಬೇಕು.ಇಲ್ಲವಾದರೆ ಕೇಂದ್ರ ಸರ್ಕಾರ ಜಾರಿಮಾಡಿರುವ ಹೊಸ ನಿಯಮದ ಮೂಲಕ 1 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ.