ಕಲಬುರಗಿ : ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಕೇಂದ್ರ ಸರ್ಕಾರವೇ ಡಿಪ್ಲೋಮಾಟಿಕ್ ಪಾಸ್ ಪೋರ್ಟ್ ಕೊಟ್ಟಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣಗೆ ಡಿಪ್ಲೋಮಾಟಿಕ್ ಪಾಸ್ ಪೋರ್ಟ್ ಕೊಟ್ಟಿದೆ. ಮಹಿಳೆ ದೂರು ಕೊಟ್ಟ ಬಳಿಕವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಮಹಿಳೆ ದೂರು ಕೊಟ್ಟ ಬಳಿಕ ಮಹಿಳಾ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಿತು. ನಂತರ ರಾಜ್ಯ ಸರ್ಕಾರ ಎಸ್ ಐಟಿ ರಚನೆಗೆ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ಪ್ರಕರಣ ಸಬಂದ ಎಲ್ಲಾ ಕಡೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ವಿಮಾನ ನಿಲ್ದಾಣ, ಬಂದರು ಸೇರಿ ಎಲ್ಲೆಡೆ ಲುಕ್ ಔಟ್ ನೋಟಿಸ್ ನೀಡಿದ್ದೇವೆ.ಕೇಂದ್ರ ಸರ್ಕಾರ ರಾಜ ತಾಂತ್ರಿಕ ಪಾಸ್ಪೋರ್ಟ್ ನೀಡಿದೆ. ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಪತ್ರ ಬರೆದಿದ್ದೇವೆ ಪ್ರಜ್ವಲ್ ರೇನು ಶೀಘ್ರದಲ್ಲೇ ವಾಪಸ್ ಕಳಿಸುತ್ತೇವೆ ಎಂದರು.
ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಸಿಎಂ ಸಿದ್ದರಾಮಯ್ಯ ಯಾಕೆ ಅವರನ್ನು ಕಳುಹಿಸುತ್ತಾರೆ? ಪ್ರಧಾನಿ ರಾಜ್ಯದ ಕಾನೂನು ಸುವ್ಯವಸ್ಥೆ ಕೆಟ್ಟಿದೆ ಅಂತಾರೆ ಅವರಿಗೆ ತಪ್ಪು ಮಾಹಿತಿ ಇರಬಹುದು ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಚೆನ್ನಾಗಿದೆ. ನೇಹಾ ಅತ್ತೆ ಆರೋಪಿಯನ್ನು ಒಂದು ಗಂಟೆಯಲ್ಲಿ ಹಿಡಿದರು ರಾಮೇಶ್ವರಂ ಕೆಎಸ್ ನಾನೇ ಮೋಾನಿಟರ್ ಮಾಡಿದ್ದೇನೆ ಎಂದು ತಿಳಿಸಿದರು.