ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (CPSEs) ಕೆಲಸ ಮಾಡುವ ಲಕ್ಷಾಂತರ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ಆಗುವ ವಿಳಂಬವನ್ನು ತಡೆಯಲು ಕೇಂದ್ರ ಸರ್ಕಾರವು ಈಗ ಅತ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವೇತನ ನೀಡಲು ವಿಳಂಬ ಮಾಡುವ ಅಥವಾ ನಿಯಮ ಉಲ್ಲಂಘಿಸುವ ಗುತ್ತಿಗೆದಾರರನ್ನು ಇನ್ನು ಮುಂದೆ ‘ಬ್ಲಾಕ್‌ಲಿಸ್ಟ್’ (ಕಪ್ಪುಪಟ್ಟಿ) ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳ ವೇತನವನ್ನು ಮುಂದಿನ ತಿಂಗಳ 7ನೇ ತಾರೀಖಿನೊಳಗೆ ಕಡ್ಡಾಯವಾಗಿ ಪಾವತಿಸಬೇಕು.
ಯಾವಾಗ ಸಂಬಳ ನೀಡಬೇಕು?
ದಿನಗೂಲಿ ನೌಕರರು: ಶಿಫ್ಟ್ ಮುಗಿದ ತಕ್ಷಣ.
ವಾರದ ಕೂಲಿ: ವಾರದ ರಜೆಗಿಂತ ಮೊದಲು.
ಮಾಸಿಕ ವೇತನ: ಮುಂದಿನ ತಿಂಗಳ 7ನೇ ತಾರೀಖಿನ ಒಳಗೆ.
ಎಲೆಕ್ಟ್ರಾನಿಕ್ ಪಾವತಿ ಕಡ್ಡಾಯ: ಎಲ್ಲಾ ವೇತನಗಳನ್ನು ಕಡ್ಡಾಯವಾಗಿ ಬ್ಯಾಂಕ್ ವರ್ಗಾವಣೆ ಅಥವಾ ಡಿಜಿಟಲ್ ರೂಪದಲ್ಲೇ ಮಾಡಬೇಕು. ನಗದು ರೂಪದ ಪಾವತಿಗೆ ಅವಕಾಶವಿರುವುದಿಲ್ಲ.
ಬ್ಲಾಕ್‌ಲಿಸ್ಟ್ ಎಚ್ಚರಿಕೆ: ವೇತನ ಪಾವತಿಯಲ್ಲಿ ಸತತವಾಗಿ ವಿಳಂಬ ಮಾಡುವ ಕಂಪನಿಗಳನ್ನು ಸರ್ಕಾರಿ ಟೆಂಡರ್‌ಗಳಿಂದ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಅಂತಹ ಕಂಪನಿಗಳು ಮುಂದಿನ 3 ವರ್ಷಗಳವರೆಗೆ ಯಾವುದೇ ಸರ್ಕಾರಿ ಗುತ್ತಿಗೆ ಪಡೆಯದಂತೆ ನಿರ್ಬಂಧ ಹೇರಲಾಗುವುದು.








