ನವದೆಹಲಿ : ವಿದೇಶಿ ಧನಸಹಾಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೃಹ ವ್ಯವಹಾರಗಳ ಸಚಿವಾಲಯ (MHA) ಶನಿವಾರ ರಾಜೀವ್ ಗಾಂಧಿ ಫೌಂಡೇಶನ್ (RGF) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ರದ್ದುಗೊಳಿಸಿದೆ.
ರಾಜೀವ್ ಗಾಂಧಿ ಫೌಂಡೇಶನ್ ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದೆ.
Centre cancels FCRA licence of Rajiv Gandhi Foundation for violating norms
Read @ANI Story | https://t.co/5PqZ3L1qk3#FCRA #RajivGandhiFoundation #GandhiFamily #RGF pic.twitter.com/sZPvRkaaM9
— ANI Digital (@ani_digital) October 23, 2022
ಮೂಲಗಳ ಪ್ರಕಾರ, ಜುಲೈ 2020 ರಲ್ಲಿ, MHA ಸಮಿತಿಯನ್ನು ರಚಿಸಿತ್ತು. ಅದರ ವರದಿಯನ್ನು ಆಧರಿಸಿ, ಪ್ರತಿಷ್ಠಾನವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಎಫ್ಸಿಆರ್ಎ ಪರವಾನಗಿಯನ್ನು ರದ್ದುಪಡಿಸುವ ಕುರಿತು ತಿಳಿಸುವ ಸೂಚನೆಯನ್ನು ಆರ್ಜಿಎಫ್ನ ಪದಾಧಿಕಾರಿಗಳಿಗೆ ಕಳುಹಿಸಲಾಗಿದೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್ಜಿಎಫ್ನ ಅಧ್ಯಕ್ಷರಾಗಿದ್ದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇತರ ಟ್ರಸ್ಟಿಗಳಾಗಿದ್ದಾರೆ.