ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ (Bangalore) ದಿನ ಬೆಳಗಾದ್ರೆ ಅಪರಾಧ ಕೃತ್ಯ(criminal act)
ಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚೋದಕ್ಕಾಗಿ ಕೇಂದ್ರ ಸರ್ಕಾರ ಇದೀಗ ಮಾಸ್ಟರ್ಪ್ಲ್ಯಾನ್ (master plan) ಮಾಡಿದೆ. ಇದಕ್ಕಾಗಿ ಎಂಸಿಸಿಟಿಎನ್ಎಸ್ ( MCCTNS ) ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
BIGG NEWS : ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕಿಸಾನ್ ಇಕೆವೈಸಿ ಗಡುವು ನಾಳೆಗೆ ಅಂತ್ಯ
ಕಳೆದ ಎರಡು ತಿಂಗಳಿಂದ ರಾತ್ರಿ 11 ಗಂಟೆಯ ನಂತರ ಪೊಲೀಸರು ಎಂಸಿಸಿಟಿಎನ್ಎಸ್ ಅಪ್ಲಿಕೇಷನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನ ಪರಿಶೀಲನೆ, ಅನುಮಾನಸ್ಪದ ವ್ಯಕ್ತಿಗಳು, ಬೆರಳಚ್ಚು ಪರಿಶೀಲನೆ ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಕಂಡು ಬಂದರೆ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಈ ಮೂಲಕ ಅಪರಾಧ ಕೃತ್ಯಗಳನ್ನು ಮುಂಚಿತವಾಗಿ ತಡೆಯಲು ಪೊಲೀಸರು ಮುಂದಾಗಿದ್ದಾರೆ.
BIGG NEWS : ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕಿಸಾನ್ ಇಕೆವೈಸಿ ಗಡುವು ನಾಳೆಗೆ ಅಂತ್ಯ
ಈಗಾಗಲೇ ಪೊಲೀಸರ ಬಳಿಯಿರುವ ಅಪರಾಧಿಗಳ ಫಿಂಗರ್ ಪ್ರಿಂಟ್ ಜೊತೆಗೆ, ಯಾವುದೇ ವ್ಯಕ್ತಿಯ ಫಿಂಗರ್ ಪ್ರಿಂಟ್ ಮ್ಯಾಚ್ ಅದರೆ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಪ್ರತಿ ಠಾಣೆಗೆ ಫಿಂಗರ್ ಪ್ರಿಂಟ್ ಚೆಕ್ಕಿಂಗ್ ಸ್ಕ್ಯಾನರ್ ವಿತರಣೆ ಮಾಡಲಾಗಿದೆ. ಸಿಬ್ಬಂದಿಗಳಿಗೆ ಸ್ಕ್ಯಾನರ್ ಬಗ್ಗೆ ತರಬೇತಿ ನೀಡಲಾಗಿದೆ