ಬೆಂಗಳೂರು : ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಇದೀಗ, ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಿಂದ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಕಾರ್ಯಕ್ರಮಕ್ಕೆ ನುಗ್ಗಿ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ನಗರದ ಗಾಂಧಿನಗರ ಒಳಿಯ ಖಾಸಗಿ ಹೋಟೆಲ್ ನಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು.
ಈ ವೇಳೆ ಏಕಾಏಕಿ ಕಾರ್ಯಕ್ರಮಜಕ್ಕೆ ನುಗ್ಗಿ ಬ್ಯಾನರ್ ಹರಿದು ಕರವೇ ಮಹಿಳಾ ಕಾರ್ಯಕರ್ತರು ಆಕ್ರೋಶ ಹೊರಹಕಿದ್ದಾರೆ. ಬೆಂಗಳೂರರಿನ ಗಾಂಧಿನಗರ ಬಳಿಯ ಖಾಸಗಿ ಹೋಟೆಲ್ ನಲ್ಲಿ ರೈಲ್ವೆ ಇಲಾಖೆಯವರು ಈ ಒಂದು ಹಿಂದಿ ದಿವಸ್ ಕಾರ್ಯಕ್ರಮ ಯೋಜನೆ ಮಾಡಿದ್ದರು ಏಕಾಏಕಿ ಕರವೇ ಮಹಿಳಾ ಕಾರ್ಯಕರ್ತೆಯರು ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿ ಕಾರ್ಯಕ್ರಮದಲ್ಲಿ ಶೀಲ್ಡ್ ಎಲ್ಲ ಒಡೆದು ಹಾಕಿ ಆಕ್ರೋಶ ಹೊರಹಾಕಿದ್ದಾರೆ ಈ ವೇಳೆ ಪೊಲೀಸರು ಬಂದು ಕರವೇ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದುಕೊಂಡರು.