ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷದ ಮುಂಜಾನೆ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. ಈ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರು ನಗರದಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಗೂ ಮುನ್ನ ಏನಾಯಿತು ಎಂದು ತಿಳಿದುಕೊಳ್ಳಲು ಯತ್ನಿಸುತ್ತಿರುವ ಪೊಲೀಸರಿಗೆ ವಿಡಿಯೋವೊಂದು ದೊರೆತಿದ್ದು, ಅದರಲ್ಲಿ ಯುವತಿಯೊಂದಿಗೆ ಮತ್ತೊಬ್ಬ ಯುವತಿ ಸ್ಕೂಟಿಯಲ್ಲಿ ಹೋಗುವುದನ್ನು ತೋರಿಸಿದೆ. ಇದರಿಂದ ಮೃತ ಯುವತಿ 20 ವರ್ಷದ ಅಂಜಲಿ ಸಿಂಗ್ ಸ್ಕೂಟಿ ಅಪಘಾತವಾದಾಗ ಒಬ್ಬಂಟಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
#WATCH | Kanjhawala death case: CCTV footage of that night shows the presence of another girl with the girl who died after being dragged for a few kilometres by a car that hit her in Sultanpuri area.
(CCTV visuals confirmed by police) pic.twitter.com/nd1NUBQVze
— ANI (@ANI) January 3, 2023
ಈ ಹೊಸ ವರ್ಷದ ಮುಂಜಾನೆ ನಡೆದ ಕ್ಯಾಪಿಟಲ್ ಶಾಕರ್ಗೆ ಹೊಸ ಟ್ವಿಸ್ಟ್ನಲ್ಲಿ, ಅಂಜಲಿ ತನ್ನ ಸ್ನೇಹಿತೆ ನಿಧಿಯೊಂದಿಗೆ ಮಾರುತಿ ಬಲೆನೊ ಕಾರು ಅವಳ ಸ್ಕೂಟರ್ಗೆ ಡಿಕ್ಕಿ ಹೊಡೆದಿರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಅಪಘಾತದಲ್ಲಿ ಗೆಳತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅಪಘಾತವಾದಾಗ ಅಂಜಲಿಯ ಕಾಲು, ಕಾರಿಗೆ ಸಿಕ್ಕಿಹಾಕಿಕೊಂಡಿದ್ದು, ಆಕೆಯನ್ನು 20 ಕಿಮೀ ದೂರದವರೆಗೆ ಎಳೆದೊಯ್ಯಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೃತ ಯುವತಿಯ ಗೆಳತಿಯನ್ನು ಪತ್ತೆ ಹಚ್ಚಿದ್ದು, ತನಿಖೆಯ ಭಾಗವಾಗಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನ ಶಾಂತಿ, ಸಂಯಮದಿಂದ ಪಡೆಯಿರಿ : ಸಿಎಂ ಬೊಮ್ಮಾಯಿ ಮನವಿ
BIG NEWS: ʻಐಫೋನ್ʼಗಳ ಬದಲಿ ಬ್ಯಾಟರಿಗಳ ವೆಚ್ಚ ಹೆಚ್ಚಿಸಲು ʻAppleʼ ನಿರ್ಧಾರ | iPhones
BREAKING NEWS: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನ ಶಾಂತಿ, ಸಂಯಮದಿಂದ ಪಡೆಯಿರಿ : ಸಿಎಂ ಬೊಮ್ಮಾಯಿ ಮನವಿ